HomeKarnatakaBIG NEWS: ಪ್ರಧಾನಿ ಮೋದಿಯೇ ದೊಡ್ಡ ಹುಲಿ ಎಂದ ಕೆ.ಎಸ್.ಈಶ್ವರಪ್ಪ

BIG NEWS: ಪ್ರಧಾನಿ ಮೋದಿಯೇ ದೊಡ್ಡ ಹುಲಿ ಎಂದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಬಂಡೀಪುರ ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲ ಎಂಬ ಕಾಂಗ್ರೆಸ್ ಟೀಕಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ನವರಿಗೆ ಟೀಕಿಸುವುದು ಬಿಟ್ಟರೆ ಬೇರೇನು ಗೊತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಅಕಸ್ಮಾತ್ ಒಂದು ಹುಲಿ ಕಂಡಿದ್ದರೆ, ಒಂದೇ ಕಾಣ್ತು ಅಂತ ಟೀಕಿಸುತ್ತಿದ್ದರು. ಕಾಂಗ್ರೆಸ್ ನವರು ಟೀಕಿಸುವುದರಲ್ಲಿಯೇ ತಮ್ಮ ಜೀವನ ಕಳೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವುದಿಲ್ಲ, ಹಾಗಾಗಿ ಟೀಕೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲ ಅನ್ನುವುದಕ್ಕಿಂತ ಮೋದಿಯೇ ದೊಡ್ಡ ಹುಲಿ. ಅವರ ನಾಯಕತ್ವ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular