alex Certify Watch Video | ಛತ್ತೀಸ್‌ಘಡದ ಬುಡಕಟ್ಟು ಜನಾಂಗದವರ ಕೆಂಪಿರುವೆ ಚಟ್ನಿ ಪರಿಚಯಿಸಿದ ವ್ಲಾಗರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಛತ್ತೀಸ್‌ಘಡದ ಬುಡಕಟ್ಟು ಜನಾಂಗದವರ ಕೆಂಪಿರುವೆ ಚಟ್ನಿ ಪರಿಚಯಿಸಿದ ವ್ಲಾಗರ್‌

ದೇಶದ ಭೌಗೋಳಿಕ ವೈವಿಧ್ಯತೆಯಷ್ಟೇ ಆಹಾರ ಸಂಸ್ಕೃತಿಯೂ ವೈವಿಧ್ಯಮಯವಾಗಿದೆ. ಟ್ರಾವೆಲ್ ವ್ಲಾಗರ್‌ ವಿದ್ಯಾ ಛತ್ತೀಸ್‌ಘಡದ ಬಸ್ತರ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಾವು ಸವಿದ ವಿಶೇಷ ಚಟ್ನಿಯೊಂದನ್ನು ತಮ್ಮ ವೀಕ್ಷಕರಿಗೆ ಪರಿಚಯಿಸಿದ್ದಾರೆ.

’ಚಿಂಟಿ ಕೀ ಚಟ್ನಿ’ ಎಂದು ಕರೆಯಲಾಗುವ ಈ ಚಟ್ನಿಯನ್ನು ಇರುವೆಗಳಿಂದ ಮಾಡಲಾಗುತ್ತದೆ.

“ಬಸ್ತರ್‌ನ 70%ಗಿಂತ ಹೆಚ್ಚಿನ ಜನಸಂಖ್ಯೆ ಬುಡಕಟ್ಟು ಜನಾಂಗಗಳಿಂದ ಮಾಡಲ್ಪಟ್ಟಿದೆ. ನಮ್ಮ ನಗರ ಜೀವನಗಳಿಗಿಂತ ಇವರ ಜೀವನಗಳು ಬಹಳ ಭಿನ್ನವಾಗಿವೆ. ಬಸ್ತರ್‌ಗೆ ಭೇಟಿ ಕೊಟ್ಟ ವೇಳೆ ಸ್ಥಳೀಯ ಬುಡಕಟ್ಟು ಜನಾಂಗದೊಂದಿಗೆ ಕಾಲ ಕಳೆಯುವ ಅವಕಾಶ ನನ್ನದಾಗಿತ್ತು. ಅವರ ಕೆಲವೊಂದು ಪದ್ಧತಿಗಳು ಬಹಳ ಆಧುನಿಕವಾಗಿವೆ. ಜೀವನದಲ್ಲಿ ಒಮ್ಮೆಯಾದರೂ ಬಸ್ತರ್‌ಗೆ ಭೇಟಿ ಕೊಡಿ,” ಎಂದು ವಿಡಿಯೋದೊಂದಿಗೆ ಪೋಸ್ಟ್ ಮಾಡಿದ್ದಾರೆ ವಿದ್ಯಾ.

ಪೋಸ್ಟ್ ಆದಾಗಿನಿಂದಲೂ ಈ ವಿಡಿಯೋಗೆ 4.9 ದಶಲಕ್ಷ ವೀಕ್ಷಣೆಗಳು ಸಂದಾಯವಾಗಿವೆ.

https://youtu.be/8Te2C_-fdiU

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...