HomeKarnatakaBIG NEWS: ಕೈ ತಪ್ಪಿದ ಟಿಕೆಟ್; ಜೆಡಿಎಸ್ ಸೇರ್ಪಡೆಗೆ ನಿರ್ಧಾರ ಪ್ರಕಟಿಸಿದ ರಘು ಆಚಾರ್

BIG NEWS: ಕೈ ತಪ್ಪಿದ ಟಿಕೆಟ್; ಜೆಡಿಎಸ್ ಸೇರ್ಪಡೆಗೆ ನಿರ್ಧಾರ ಪ್ರಕಟಿಸಿದ ರಘು ಆಚಾರ್

ಚಿತ್ರದುರ್ಗ: ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಬೆನ್ನಲ್ಲೇ ಕೈ ಪಾಳಯದ ವಿರುದ್ಧ ಸಿಡಿದೆದ್ದಿರುವ ಟಿಕೆಟ್ ಆಕಾಂಕ್ಷಿಗಳು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಚುನಾವಣೆ ವೇಳೆ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿಯೂ ಟಿಕೆಟ್ ಸಿಗದ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಎಂ ಎಲ್ ಸಿ ರಘು ಆಚಾರ್ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಚಿತ್ರದುರ್ಗದಲ್ಲಿ ಬೆಂಬಲಿಗರ ಸಭೆ ಬಳಿಕ ಶಾಸಕ ಟಿ.ಎ.ಶರವಣ ಭೇಟಿಯಾದ ರಘು ಆಚಾರ್, ಜೆಡಿಎಸ್ ಗೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಜೆಡಿಎಸ್ ಸೇರಲು ನಿರ್ಧರಿಸಿದ್ದೇನೆ. ಜಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲು ಶ್ರಮಿಸುತ್ತೇನೆ. ಟಿಕೆಟ್ ನೀಡುವ ನಿರ್ಧಾರವನ್ನು ಜೆಡಿಎಸ್ ವರಿಷ್ಠರು ಮಾಡ್ತಾರೆ. ಚಿತ್ರದುರ್ಗದಲ್ಲಿ ಏ.17 ರಂದು ನಾಮಪತ್ರ ಸಲ್ಲಿಸುತ್ತೇನೆ. ಟಿಕೆಟ್ ಕೊಟ್ಟರೆ ಸಂತೋಷ ಇಲ್ಲವಾದರೆ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುತ್ತೇನೆ. ಸ್ವಾಭಿಮಾನಕ್ಕೆ ಧಕ್ಕೆ ತಂದವರಿಗೆ ಚುನಾವಣೆಯಲ್ಲಿಯೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular