ಹುಬ್ಬಳ್ಳಿ: ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಟ ಕಿಚ್ಚ ಸುದೀಪ್ ಬೆಂಬಲ ನೀಡಿರುವ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಈ ಹಿಂದೆ ಕುಮಾರಸ್ವಾಮಿ ಯಾವ ಸ್ಟಾರ್ ನಟರನ್ನು ಕರೆದುಕೊಂಡು ಬಂದಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಮನಗರ ಬೈ ಎಲೆಕ್ಷನ್ ನಲ್ಲಿ ಅಂಬರೀಶ್ ಅವರಿಂದ ಪ್ರಚಾರ ಮಾಡಿಸಿದರು. ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡುವುದು ಹೊಸದೇನಲ್ಲ. ಸಿನಿಮಾ ನಟರು ಎಲ್ಲಾ ಪಕ್ಷಕ್ಕೂ ಬೆಂಬಲ ಕೊಡುತ್ತಾರೆ ಎಂದರು.
ನಮ್ಮ ಜೊತೆ ಸೂಪರ್ ಸ್ಟಾರ್ ಬಂದರೆ ಇವರಿಗೆ ಯಾಕೆ ಕಳವಳ ? ಕಾಂಗ್ರೆಸ್, ಜೆಡಿಎಸ್ ನವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡುತ್ತಾರೆ ಎಂದು ಟಾಂಗ್ ನೀಡಿದರು.