HomeIndiaಆಂಧ್ರದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; 3 ತಿಂಗಳಲ್ಲಿ ಮೂರನೇ ಘಟನೆ

ಆಂಧ್ರದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; 3 ತಿಂಗಳಲ್ಲಿ ಮೂರನೇ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮೂರು ತಿಂಗಳಲ್ಲಿ ಮೂರನೇ ಘಟನೆ ಇದಾಗಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಏಪ್ರಿಲ್ 5 ರ ಬುಧವಾರದಂದು ಈ ಘಟನೆ ನಡೆದಿದ್ದು, ಕೆಲವು ಅಪರಿಚಿತ ದುಷ್ಕರ್ಮಿಗಳು ವಿಶಾಖಪಟ್ಟಣಂ-ಸಿಕಂದರಾಬಾದ್ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ದಾರೆ. ಗಾಜಿನ ಕಿಟಕಿಯನ್ನು ಒಡೆದಿದ್ದು, ಈ ಕೃತ್ಯದಿಂದಾಗಿ ರೈಲು ನಾಲ್ಕು ಗಂಟೆಗಳ ಕಾಲ ವಿಳಂಬವಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬುಧವಾರ ವಿಶಾಖಪಟ್ಟಣದಿಂದ ಹೊರಡುವ ವಂದೇಭಾರತ್ ಎಕ್ಸ್‌ ಪ್ರೆಸ್ 05:45 ಗಂಟೆಗೆ ಹೊರಡುವ ಬದಲು 09:45 ಗಂಟೆಗೆ ಮರು ನಿಗದಿಪಡಿಸಲಾಗಿತ್ತು. ದುಷ್ಕರ್ಮಿಗಳ ಕಲ್ಲು ತೂರಾಟದಿಂದಾಗಿ ಸಿ -8 ಕೋಚ್ ಕಿಟಕಿ ಗಾಜು ಒಡೆದಿದೆ ಎಂದು ವಾಲ್ಟೇರ್ ಡಿವಿಷನ್ ರೈಲ್ವೆ ತಿಳಿಸಿದೆ. ವಿಶಾಖಪಟ್ಟಣಂ-ಸಿಕಂದರಾಬಾದ್ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವುದು ಇದು ಮೂರನೇ ಬಾರಿ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular