HomeInternational5 ನೇ ಬ್ರೇಕ್ ಅಪ್....! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್

5 ನೇ ಬ್ರೇಕ್ ಅಪ್….! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್

92 ವರ್ಷದ ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಅವರಿಗೆ ಇನ್ನು ಮದುವೆ ಭಾಗ್ಯ ಇಲ್ಲ ಎಂದೆನಿಸುತ್ತಿದೆ. ಶೀಘ್ರದಲ್ಲೇ 5ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಡುವೆ ಅವರು ಸಿಂಗಲ್ ಆಗೇ ಉಳಿಯುವ ಲಕ್ಷಣಗಳು ಗೋಚರಿಸಿವೆ. ‌

ಆಸ್ಟ್ರೇಲಿಯಾ ಮೂಲದ ಅಮೆರಿಕಾ ಮಾಧ್ಯಮ ಲೋಕದ ದಿಗ್ಗಜ 92 ವರ್ಷದ ರೂಪರ್ಟ್ ಮುರ್ಡೋಕ್ ಅವರು 62 ವರ್ಷದ ಮಾಜಿ ನಿರೂಪಕಿ, ಮಾಜಿ ಮಾಡೆಲ್ ಆನ್ ಲೆಸ್ಲೆ ಸ್ಮಿತ್ ಅವರೊಂದಿಗಿನ ಸಂಬಂಧವನ್ನ ಮುರಿದುಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ. ಜಾತಿಯ ಕಾರಣದಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುರ್ಡೋಕ್ ತನ್ನ ನಾಲ್ಕನೇ ಪತ್ನಿ ಜೆರ್ರಿ ಹಾಲ್‌ಗೆ ವಿಚ್ಛೇದನ ನೀಡಿದ ತಿಂಗಳ ನಂತರ ಈ ಬೇಸಿಗೆಯಲ್ಲಿ ಮಾಜಿ ದಂತವೈದ್ಯೆಯನ್ನ ಮದುವೆಯಾಗಲು ನಿರ್ಧರಿಸಿದ್ದಾರೆನ್ನಲಾಗಿತ್ತು. ಅವರು ಮಾಜಿ ಮಾಡೆಲ್ ಕೈ ಬೆರಳಿಗೆ ಡೈಮಂಡ್ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದರು.

14 ವರ್ಷದಿಂದ ವಿಧವೆಯಾಗಿರುವ ಆನ್ ಲೆಸ್ಲೆ ಸ್ಮಿತ್ ಅವರಿಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದನ್ನ ಮುರ್ಡೋಕ್ ಒಪ್ಪಿಕೊಂಡಿದ್ದರು. ಆದರೆ ಈಗ ಸಂಬಂಧ ಮುರಿದುಬಿದ್ದಿದ್ದು, 92 ವರ್ಷ ವಯಸ್ಸಿನ ಮುರ್ಡೊಕ್ ಮತ್ತೊಮ್ಮೆ ಪ್ರೀತಿಯನ್ನು ಹುಡುಕುತ್ತಾರೋ ಅಥವಾ ಅವರು ತಮ್ಮ ವ್ಯವಹಾರದತ್ತ ಗಮನ ಹರಿಸುತ್ತಾರೋ ಕಾದು ನೋಡಬೇಕಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular