HomeKarnatakaBIG NEWS: ನನ್ನ ಬೆಂಬಲ ಪಕ್ಷಕ್ಕಲ್ಲ; ವ್ಯಕ್ತಿಗೆ ಮಾತ್ರ; ಸಿಎಂ ಬೊಮ್ಮಾಯಿಗೆ ನನ್ನ ಬೆಂಬಲ ಎಂದ...

BIG NEWS: ನನ್ನ ಬೆಂಬಲ ಪಕ್ಷಕ್ಕಲ್ಲ; ವ್ಯಕ್ತಿಗೆ ಮಾತ್ರ; ಸಿಎಂ ಬೊಮ್ಮಾಯಿಗೆ ನನ್ನ ಬೆಂಬಲ ಎಂದ ನಟ ಕಿಚ್ಚ ಸುದೀಪ್

ಬೆಂಗಳೂರು: ಇಲ್ಲಿ ರಾಜಕೀಯ ವಿಚಾರ ಬರಲ್ಲ. ನನ್ನ ಬೆಂಬಲ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ನಾನು ಚಿಕ್ಕಂದಿನಿಂದಲೂ ಬಸವರಾಜ್ ಬೊಮ್ಮಾಯಿ ಅವರನ್ನು ನೋಡಿದ್ದೇನೆ. ನಾನು ಚಿತ್ರರಂಗದಲ್ಲಿ ಕಷ್ಟದ ದಿನಗಳಲ್ಲಿ ಇದ್ದಾಗ ನನ್ನ ಬೆನ್ನಿಗೆ ಹಲವರು ನಿಂತಿದ್ದರು. ಅವರಲ್ಲಿ ಬೊಮ್ಮಾಯಿ ಅವರು ಕೂಡ ಒಬ್ಬರು. ಸಿಎಂ ಬೊಮ್ಮಾಯಿ ಅವರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಬೊಮ್ಮಾಯಿ ಅವರ ಬಗ್ಗೆ ಅದೇನೋ ವಿಶೇಷವಾದ ಕಾಳಜಿ. ಹಾಗಾಗಿ ಇಲ್ಲಿ ರಾಜಕೀಯ ಬರಲ್ಲ. ಬೊಮ್ಮಾಯಿ ಅವರು ಬೇರೆ ಪಕ್ಷದಲ್ಲಿದ್ದರೂ ನಾನು ಅವರ ಪರ ಇರುತ್ತೇನೆ. ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ. ಹಾಗಾಗಿ ಸಿಎಂ ಬೊಮ್ಮಾಯಿ ಅವರ ಪರ ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಬೊಮ್ಮಾಯಿ ಅವರಿಗೆ ನನ್ನ ಬೆಂಬಲ. ಅವರು ಹೇಳಿದವರ ಪರವಾಗಿ ಪ್ರಚಾರ ಮಾಡುತ್ತೇನೆ. ಕಷ್ಟದ ದಿನಗಳಲ್ಲಿ ನನಗೆ ಸಹಾಯ ಮಾಡಿದವರಿಗೆ ನನ್ನ ಬೆಂಬಲ ಇದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಪಕ್ಷ ಎಂದು ನಾನಿಲ್ಲಿ ಬಂದಿಲ್ಲ. ವ್ಯಕ್ತಿಯ ಪರವಾಗಿ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಕಾರಣಕ್ಕೂ ನಾನು ರಾಜಕೀಯ ಪ್ರವೇಶ ಮಾಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ. ಹಣಕ್ಕಾಗಿ ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಎಲ್ಲರ ಪರ ಚುನಾವಣೆ ಪ್ರಚಾರ ಮಾಡಲು ಆಗಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಅಂಕಲ್ ಪರವಾಗಿ, ಅವರು ಯಾರ ಪರ ಹೇಳುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular