ವನ್ಯಮೃಗಗಳ ಬೇಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.ಅಸಾಧ್ಯ ಎನ್ನುವ ರೀತಿಯಲ್ಲಿ ಕೆಲವೊಮ್ಮೆ ಬೇಟೆಗಳನ್ನು ಆಡುವುದನ್ನು ನೋಡಬಹುದು. ಆದರೆ ಈಗ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ಬಹುಶಃ ನೀವು ಇಂಥ ಬೇಟೆಯನ್ನು ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ ಬಿಡಿ.
ಈ ವಿಡಿಯೋದಲ್ಲಿ ಹಿಮ ಚಿರತೆ ಎತ್ತರದ ಬಂಡೆಯ ಮೇಲೆ ಕುಳಿತಿದೆ. ಜಿಂಕೆ ಬಂದದ್ದನ್ನು ನೋಡಿ ಅದು ಜಿಂಕೆಯನ್ನು ಹಿಂಬಾಲಿಸಿ ಹಿಡಿಯುತ್ತದೆ. ಆದರೆ ಮುಂದೆ ನಡೆಯುವುದೇ ರೋಚಕ, ಹಿಮ ಚಿರತೆ ಮತ್ತು ಜಿಂಕೆ ಎರಡೂ ಜಾರಿ ಪ್ರಪಾತದಲ್ಲಿ ಬೀಳುತ್ತದೆ.
ಇಷ್ಟಾದರೂ ಜಿಂಕೆ, ಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜಿಂಕೆ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದರೆ, ಸಿಕ್ಕ ಬೇಟೆಯನ್ನು ಸುಲಭದಲ್ಲಿ ತಪ್ಪಿಸಿಕೊಳ್ಳಲು ಬಿಡದೇ ಚಿರತೆ ಹೆಣಗಾಡುತ್ತದೆ.
ಪ್ರಪಾತದಲ್ಲಿಯೇ ಎರಡೂ ಸಾಕಷ್ಟು ಹೊತ್ತು ಕಾದಾಟ ನಡೆಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋವನ್ನು ಮೊದಲು ವೈಲ್ಡ್ ಇಂಡಿಯಾ ಟ್ವೀಟ್‌ನೊಂದಿಗೆ ಹಂಚಿಕೊಂಡಿದೆ. ನೆಟ್ಟಿಗರು ಈ ವಿಡಿಯೋವನ್ನು ಉಸಿರು ಬಿಗಿ ಹಿಡಿದು ನೋಡುವಂತಿದೆ.