![](https://kannadadunia.com/wp-content/uploads/2023/04/5ceedb14-7648-4392-a38b-d19069f4627d.jpg)
ದ್ವಿ ಚಕ್ರವಾಹನವನ್ನು ಅಟ್ಟಿಸಿಕೊಂಡು ಬಂದ ಬೀದಿನಾಯಿಗಳ ಹಾವಳಿಯಿಂದ ಗಾಬರಿಗೊಂಡ ಮಹಿಳೆ ಪಾರ್ಕಿಂಗ್ ಮಾಡಿದ್ದ ಕಾರ್ ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಒಡಿಶಾದಲ್ಲಿ ನಡೆದಿರುವ ಬೆಚ್ಚಿಬೀಳಿಸುವ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬೆರ್ಹಾಂಪುರದಲ್ಲಿ ಮಹಿಳೆಯನ್ನು ಬೀದಿನಾಯಿಗಳು ಅಟ್ಟಿಸಿಕೊಂಡು ಹೋಗುತ್ತಿದ್ದರಿಂದ ಮಹಿಳೆ ಗಮನವನ್ನು ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಸ್ಕೂಟರ್ ನಲ್ಲಿ ಮಗು ಸೇರಿದಂತೆ ಮೂವರಿದ್ದುದನ್ನು ತೋರಿಸುತ್ತದೆ.
ಗಾಡಿ ಕಾರ್ ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಅವರೆಲ್ಲರೂ ಗಾಳಿಯಲ್ಲಿ ಹಾರಿ ಬಿದ್ದರು. ಒಂದು ನಾಯಿ ಕೂಡ ವಾಹನದಲ್ಲಿ ಸಿಲುಕಿಕೊಂಡು ಅಪಘಾತದ ನಂತರ ಪರಾರಿಯಾಗಿದೆ.
ಘಟನೆಯಲ್ಲಿ ಮಗು ಮತ್ತು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಈ ಘಟನೆ ನಡೆದ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಮಹಿಳೆಯರನ್ನು ಸುಪ್ರಿಯಾ ಮತ್ತು ಸುಸ್ಮಿತಾ ಎಂದು ಗುರುತಿಸಲಾಗಿದೆ.