HomeKarnatakaBIG NEWS: ಡಕೋಟಾ ಬಸ್ ಹತ್ತಲು ಸಿದ್ಧರಾಗಿದ್ದಾರೆ; ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಹೆಚ್.ಡಿ. ರೇವಣ್ಣ ಲೇವಡಿ

BIG NEWS: ಡಕೋಟಾ ಬಸ್ ಹತ್ತಲು ಸಿದ್ಧರಾಗಿದ್ದಾರೆ; ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೆ ಹೆಚ್.ಡಿ. ರೇವಣ್ಣ ಲೇವಡಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಮಾಜಿ ಶಾಸಕ ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಶಿವಲಿಂಗೇಗೌಡ ಡಕೋಟಾ ಬಸ್ ಹತ್ತಲು ಮುಂದಾಗಿದ್ದಾರೆ. ಕಾಂಗ್ರೆಸ್ ನವರು ತಮ್ಮ ಡಕೋಟಾ ಬಸ್ ಹತ್ತಲಿ ಅಂತಾ ಕಾಯುತ್ತಿದ್ದಾರೆ. ಬಸ್ ಎಲ್ಲಿ ನಿಲ್ಲುತ್ತೋ ಗೊತ್ತಿಲ್ಲ ಎಂದರು.

ಅರಸಿಕೆರೆ ಶಾಸಕರಾಗಿದ್ದ ಶಿವಲಿಂಗೇಗೌಡರನ್ನು 15 ವರ್ಷಗಳ ಕಾಲ ಸಾಕಿದ್ದೇನೆ. ಈಗ ಶಿರಸಿಗೆ ಹೋಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನಾನೇ ಸಾಕಿದಾ ಗಿಣಿ ಎಂದು ಅರಸಿಕೆರೆ ಜನ ಹೇಳುತ್ತಿದ್ದಾರೆ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular