HomeInternationalಬಾಲಕರ ’ಬಕೆಟ್ ಚಾಲೆಂಜ್’ ಚೇಷ್ಟೆ‌ ಎಫೆಕ್ಟ್; ಆಸ್ಪತ್ರೆ ಪಾಲಾದ ಮಹಿಳೆ

ಬಾಲಕರ ’ಬಕೆಟ್ ಚಾಲೆಂಜ್’ ಚೇಷ್ಟೆ‌ ಎಫೆಕ್ಟ್; ಆಸ್ಪತ್ರೆ ಪಾಲಾದ ಮಹಿಳೆ

ನಾಲ್ವರು ಹುಡುಗರ ಬಕೆಟ್‌ ಚಾಲೆಂಜ್ ಚೇಷ್ಟೆಯ ಪರಿಣಾಮ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಜರುಗಿದೆ.

ಟಸ್ಟಿನ್‌ನ ಟಾರ್ಗೆಟ್ ಸ್ಟೋರ್‌ನ ಮಕ್ಕಳ ವಿಭಾಗದಲ್ಲಿ ಶಾಪಿಂಗ್ ಮಾಡುತ್ತಿದ್ದ ಲಾನಾ ಕ್ಲೇ ಮೊನಾಘನ್‌ ಅವರ ಮೇಲೆ ದಿಢೀರ್‌ ಎಂದು ಬಕೆಟ್ ಇಡಲಾಗಿದೆ. ಸಾಮಾನ್ಯವಾಗಿ ಶಾಪಿಂಗ್ ಮಾಡುತ್ತಿರುವ ವ್ಯಕ್ತಿಗೆ ಹೀಗೆ ಹಿಂಬದಿಯಿಂದ ದಿಢೀರ್‌ ಎಂದು ತಲೆ ಮೇಲೆ ಬಕೆಟ್ ಇಟ್ಟು ಅವರ ಪ್ರತಿಕ್ರಿಯೆ ಗಮನಿಸುವುದೇ ಈ ಬಕೆಟ್ ಚಾಲೆಂಜ್‌ನ ಮೋಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಭಾನುವಾರ, ಮಾರ್ಚ್ 26, 2023, ಮದ್ಯಾಹ್ನ 2:45ರ ವೇಳೆ, ನಾಲ್ವರು ಬಾಲಕರು ಟಾರ್ಗೆಟ್‌ ಸ್ಟೋರ್‌ಗೆ ಆಗಮಿಸಿ ಓಡಾಡಿದ್ದಾರೆ. ಕೆಲ ನಿಮಿಷಗಳ ಬಳಿಕ, ಇವರಲ್ಲಿ ಒಬ್ಬ ಬಕೆಟ್ ಒಂದನ್ನು ಎತ್ತಿಕೊಂಡು ವಯಸ್ಕ ಮಹಿಳೆಯ ತಲೆಯ ಮೇಲೆ ಇಟ್ಟಿದ್ದಾನೆ. ಕೆಲ ಸೆಕೆಂಡ್‌ಗಳ ಬಳಿಕ, ಈ ಬಾಲಕರು ಅಂಗಡಿಯಿಂದ ಓಡಿ ಹೋಗುವುದು ಕಂಡು ಬಂದಿದೆ,” ಎಂದು ಟಸ್ಟಿನ್ ಪೊಲೀಸ್ ಇಲಾಖೆ ತಿಳಿಸಿದೆ.

“ಕೂಡಲೇ ಗಾಬರಿಗೊಂಡ ಮಹಿಳೆ, ಕುಸಿದು ಬಿದ್ದ ಕಾರಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಸ್ಥಿರವಾಗಿದ್ದಾರೆ ಎಂದು ವರದಿ ಪಡೆಯಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಟಸ್ಟಿನ್ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದು, ಘಟನೆ ಸಂಬಂಧ ಇನ್ನಷ್ಟು ಮಾಹಿತಿ ಇದ್ದವರು ತಮ್ಮನ್ನು ಸಂಪರ್ಕಿಸಿ ಎಂದು ವಿನಂತಿಸಿಕೊಂಡಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular