alex Certify ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ತನ್ನ ನಾಲ್ಕನೇ ವಯಸ್ಸಿನಲ್ಲೇ ಪುಸ್ತಕವೊಂದನ್ನು ಪ್ರಕಟಿಸಿದ ಬಾಲಕನೊಬ್ಬ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಯುಎಇನ ಸಯೀದ್ ರಶೀದ್ ಅಲ್‌ಮೆಹೆಯ್ರಿ ಹೆಸರಿನ ಈ ಬಾಲಕನಿಗೆ ಈಗ 4 ವರ್ಷ 218 ದಿನಗಳ ವಯಸ್ಸು.

“ಮಾರ್ಚ್ 9, 2023ರಂದು ಖಾತ್ರಿ ಪಡಿಸಿಕೊಂಡಂತೆ, ’ ದಿ ಎಲಿಫೆಂಟ್ ಸಯೀದ್ ಅಂಡ್‌ ದಿ ಬಿಯರ್‌’ ಹೆಸರಿನ ಮಕ್ಕಳ ಪುಸ್ತಕವೊಂದರ 1,000 ಪ್ರತಿಗಳ ಮಾರಾಟ ಮಾಡಿದ ಬಳಿಕ, ಈತನ ದಾಖಲೆ ಪರಿಶೀಲಿಸಲ್ಪಟ್ಟಿದೆ. ಎರಡು ಪ್ರಾಣಿಗಳ ನಡುವಿನ ಅನಿರೀಕ್ಷಿತ ಸ್ನೇಹ ಹಾಗೂ ಪ್ರೀತಿಯ ಕಥೆ ಇದಾಗಿದೆ,” ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕ ತಿಳಿಸಿದೆ.

ಸಯೀದ್‌ನ ಅಕ್ಕ, 8 ವರ್ಷ ವಯಸ್ಸಿನ ಅಲ್‌ಧಾಬಿ ದ್ವಿಭಾಷೆಯಲ್ಲಿ ಪುಸ್ತಕವೊಂದನ್ನು ಪ್ರಕಟಿಸಿದ್ದು, ಇಷ್ಟು ಕಿರಿಯ ವಯಸ್ಸಿನಲ್ಲಿ ಹೀಗೊಂದು ದಾಖಲೆ ಮಾಡಿದ ಶ್ರೇಯ ಹೊಂದಿದ್ದಾಳೆ.

ರೇನ್‌ಬೋ ಚಿಮ್ನೆ ಎಜುಕೇಶನಲ್ ಏಡ್ಸ್ ಹೆಸರಿನ ಸ್ಥಳೀಯ ಮುದ್ರಣ ಮನೆಯೊಂದನ್ನು ನಡೆಸುವ ಅಲ್‌ಧಬಿ ಯುಎಇನ ಅತ್ಯಂತ ಕಿರಿಯ ಉದ್ಯಮಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...