HomeInternationalನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ನಾಲ್ಕನೇ ವಯಸ್ಸಿಗೇ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ಬಾಲಕ

ತನ್ನ ನಾಲ್ಕನೇ ವಯಸ್ಸಿನಲ್ಲೇ ಪುಸ್ತಕವೊಂದನ್ನು ಪ್ರಕಟಿಸಿದ ಬಾಲಕನೊಬ್ಬ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಯುಎಇನ ಸಯೀದ್ ರಶೀದ್ ಅಲ್‌ಮೆಹೆಯ್ರಿ ಹೆಸರಿನ ಈ ಬಾಲಕನಿಗೆ ಈಗ 4 ವರ್ಷ 218 ದಿನಗಳ ವಯಸ್ಸು.

“ಮಾರ್ಚ್ 9, 2023ರಂದು ಖಾತ್ರಿ ಪಡಿಸಿಕೊಂಡಂತೆ, ’ ದಿ ಎಲಿಫೆಂಟ್ ಸಯೀದ್ ಅಂಡ್‌ ದಿ ಬಿಯರ್‌’ ಹೆಸರಿನ ಮಕ್ಕಳ ಪುಸ್ತಕವೊಂದರ 1,000 ಪ್ರತಿಗಳ ಮಾರಾಟ ಮಾಡಿದ ಬಳಿಕ, ಈತನ ದಾಖಲೆ ಪರಿಶೀಲಿಸಲ್ಪಟ್ಟಿದೆ. ಎರಡು ಪ್ರಾಣಿಗಳ ನಡುವಿನ ಅನಿರೀಕ್ಷಿತ ಸ್ನೇಹ ಹಾಗೂ ಪ್ರೀತಿಯ ಕಥೆ ಇದಾಗಿದೆ,” ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಯೀದ್‌ನ ಅಕ್ಕ, 8 ವರ್ಷ ವಯಸ್ಸಿನ ಅಲ್‌ಧಾಬಿ ದ್ವಿಭಾಷೆಯಲ್ಲಿ ಪುಸ್ತಕವೊಂದನ್ನು ಪ್ರಕಟಿಸಿದ್ದು, ಇಷ್ಟು ಕಿರಿಯ ವಯಸ್ಸಿನಲ್ಲಿ ಹೀಗೊಂದು ದಾಖಲೆ ಮಾಡಿದ ಶ್ರೇಯ ಹೊಂದಿದ್ದಾಳೆ.

ರೇನ್‌ಬೋ ಚಿಮ್ನೆ ಎಜುಕೇಶನಲ್ ಏಡ್ಸ್ ಹೆಸರಿನ ಸ್ಥಳೀಯ ಮುದ್ರಣ ಮನೆಯೊಂದನ್ನು ನಡೆಸುವ ಅಲ್‌ಧಬಿ ಯುಎಇನ ಅತ್ಯಂತ ಕಿರಿಯ ಉದ್ಯಮಿಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular