HomeInternationalತೂಕ ಹೆಚ್ಚಿಸಿಕೊಳ್ಳುವ ಪಣ ತೊಟ್ಟ ಆಸಾಮಿ: 343 ಕೆ.ಜಿ ತೂಗುವ ಗುರಿಯಂತೆ....!

ತೂಕ ಹೆಚ್ಚಿಸಿಕೊಳ್ಳುವ ಪಣ ತೊಟ್ಟ ಆಸಾಮಿ: 343 ಕೆ.ಜಿ ತೂಗುವ ಗುರಿಯಂತೆ….!

ನ್ಯೂಯಾರ್ಕ್​: ತೂಕ ಅತಿ ಹೆಚ್ಚಾಗುವುದನ್ನು ದೊಡ್ಡ ನ್ಯೂನತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಹೆಚ್ಚಾಗಿ ಹಲವಾರು ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಆದರೆ, ಅಮೆರಿಕದ ವ್ಯಕ್ತಿಯೊಬ್ಬರು ತೂಕ ಹೆಚ್ಚಿಸಿಕೊಳ್ಳುವ ಪಣ ತೊಟ್ಟಿದ್ದು, ಆ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ.

ಬ್ರಿಯಾನ್ ಸ್ಟೀಲ್ ಎಂಬಾತ ಓನ್ಲಿ ಫ್ಯಾನ್ಸ್ ಖಾತೆಯನ್ನು ಪ್ರಾರಂಭಿಸಿದ್ದು, ಅದರಲ್ಲಿ ಬೆಳೆಯುತ್ತಿರುವ ಹೊಟ್ಟೆಯನ್ನು ತೋರಿಸುತ್ತಾನೆ. 46 ವರ್ಷ ವಯಸ್ಸಿನ ಅವರು 82.55 ಕೆ.ಜಿ ತೂಗುತ್ತಿದ್ದರು. ಈಗ ಅವರು ತಮ್ಮ ತೂಕವನ್ನು ದುಪ್ಪಟ್ಟು ಮಾಡಿಕೊಂಡಿದ್ದು, ಸುಮಾರು ಎರಡು ಪಟ್ಟು ತೂಕವನ್ನು ಹೊಂದಿದ್ದಾರೆ. ಈಗ ಅವರ ತೂಕ 158.7 ಕಿಲೋಗ್ರಾಂಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾನು 343 ಕಿಲೋಗ್ರಾಂಗಳಷ್ಟು ತೂಗುವವರೆಗೂ ಇದನ್ನು ಮುಂದುವರೆಸುತ್ತೇನೆ ಎಂದಿದ್ದಾನೆ ಬ್ರಿಯಾನ್​. ಪ್ರಸ್ತುತ ತಮ್ಮ ಗುರಿಯನ್ನು ಸಾಧಿಸಲು ದಿನಕ್ಕೆ ಕನಿಷ್ಠ 12 ಸಾವಿರ ಕ್ಯಾಲೊರಿಗಳನ್ನು ತಿನ್ನುತ್ತಾರೆ ಮತ್ತು ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನದನ್ನು ಸೇವಿಸುತ್ತಾರಂತೆ!

ವೃತ್ತಿಯಲ್ಲಿ ಬರಹಗಾರರಾಗಿರುವ ಈತ ತೂಕ ಹೆಚ್ಚಿಸಿಕೊಂಡರೂ ಆರೋಗ್ಯವಂತನಾಗಿರಬಹುದು ಎಂಬುದನ್ನು ತೋರಿಸುವ ಆಸೆಯಂತೆ. ಆಹಾರವನ್ನು ಸೇವಿಸುವುದರ ಹೊರತಾಗಿ, ಅವರು ತೂಕವನ್ನು ಹೆಚ್ಚಿಸಲು ಮಾಸ್-ಗೈನರ್ ಶೇಕ್‌ಗಳನ್ನು ಬಳಸುತ್ತಾನೆ. ಅತಿ ಹೆಚ್ಚು ಜಂಕ್ ಫುಡ್ ಸೇವಿಸುತ್ತಾನೆ.

For Latest News Updates, Join Our Whatsapp Community🚩
RELATED ARTICLES

Most Popular