HomeKarnatakaBIG NEWS: ಯಾವ ಕ್ಷೇತ್ರದಲ್ಲೂ ಯಾರನ್ನೂ ಕಟ್ಟಿಹಾಕಲು ಆಗಲ್ಲ; ವರುಣಾದಲ್ಲಿ ಯಾರೇ ಎದುರಾಳಿಯಾದರೂ ಸಮಸ್ಯೆಯಿಲ್ಲ ಎಂದ...

BIG NEWS: ಯಾವ ಕ್ಷೇತ್ರದಲ್ಲೂ ಯಾರನ್ನೂ ಕಟ್ಟಿಹಾಕಲು ಆಗಲ್ಲ; ವರುಣಾದಲ್ಲಿ ಯಾರೇ ಎದುರಾಳಿಯಾದರೂ ಸಮಸ್ಯೆಯಿಲ್ಲ ಎಂದ ಸಿದ್ದರಾಮಯ್ಯ

ಮೈಸೂರು: ವರುಣಾದಲ್ಲಿ ಯಾರೇ ಎದುರಾಳಿಯಾದರೂ ಯಾವುದೇ ಸಮಸ್ಯೆಯಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಾರನ್ನೂ ಯಾವ ಕ್ಷೇತ್ರದಲ್ಲೂ ಯಾರೂ ಕಟ್ಟಿ ಹಾಕಲು ಆಗಲ್ಲ. ಕಟ್ಟಿ ಹಾಕುವುದು ಮತ್ತೊಂದು ನಾಯಕರ ಕೈಲಿಲ್ಲ. ಮತದಾರ ಮಾತ್ರ ಆ ಕೆಲಸ ಮಾಡಬಹುದು ಅಷ್ಟೇ ಎಂದರು.

ನಾನು ಈಗಲೂ ವರುಣಾ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ. ನಾಮಪತ್ರ ಸಲ್ಲಿಸಲು ಮಾತ್ರ ವರುಣಾಗೆ ಹೋಗುತ್ತೇನೆ. ನನ್ನ ಎದುರಾಳಿ ಯಾರು ಎಂದು ಯಾವತ್ತೂ ಯೋಚನೆ ಮಾಡಲ್ಲ. ಎದುರಾಳಿ ಯಾರಾದರೂ ಆಗಲಿ ನನಗೆ ತೊಂದರೆ ಇಲ್ಲ. ವರುಣಾ ಕ್ಷೇತ್ರದ ಜವಾಬ್ದಾರಿಯನ್ನು ಯತೀಂದ್ರ ನೋಡಿಕೊಳ್ತಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular