HomeKarnatakaBIG NEWS: ಹಾಸನ DYSP ವಿರುದ್ಧ ಕ್ರಮಕ್ಕೆ ಹೆಚ್.ಡಿ.ರೇವಣ್ಣ ಆಗ್ರಹ; ಬೇಸತ್ತ ಅಧಿಕಾರಿಯಿಂದ ಸ್ವಯಂ ವರ್ಗಾವಣೆಗೆ...

BIG NEWS: ಹಾಸನ DYSP ವಿರುದ್ಧ ಕ್ರಮಕ್ಕೆ ಹೆಚ್.ಡಿ.ರೇವಣ್ಣ ಆಗ್ರಹ; ಬೇಸತ್ತ ಅಧಿಕಾರಿಯಿಂದ ಸ್ವಯಂ ವರ್ಗಾವಣೆಗೆ ಮನವಿ

ಹಾಸನ: ಹಾಸನ ಡಿ ವೈ ಎಸ್ ಪಿ ಉದಯ್ ಭಾಸ್ಕರ್ ನಿಸ್ಪಕ್ಷಪಾತವಾಗಿ ಕೆಲಸ ಮಾಡದ ಆರೋಪ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.

ರೇವಣ್ಣ ಆರೋಪಕ್ಕೆ ಬೇಸತ್ತು ಡಿ ವೈ ಎಸ್ ಪಿ ಉದಯ್ ಭಾಸ್ಕರ್ ಸ್ವಯಂ ವರ್ಗಾವಣೆ ಕೋರಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ನಿಸ್ಪಕ್ಷಪಾತ ಹಾಗೂ ನೇರ ನುಡಿಯ ವ್ಯಕ್ತಿತ್ವವುಳ್ಳವನು. ಅವರ ಒತ್ತಾಯಕ್ಕೆ ಮಣಿಯದ ಕಾರಣ ಅನಗತ್ಯ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಿ ಮೇಲಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮೇಲಧಿಕಾರಿಗಳಿಗೂ ಇರಿಸುಮುರಿಸು ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ತಮಗೆ ವರ್ಗಾವಣೆ ಮಾಡುವಂತೆ ಉದಯ್ ಭಾಸ್ಕರ್ ಇಲಾಖೆಗೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular