alex Certify Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ರೈಲ್ವೇ ನಿಲ್ದಾಣದಲ್ಲಿ ಮನಸೋಯಿಚ್ಛೆ ಡಾನ್ಸ್ ಮಾಡಿದ ಯುವತಿ

ಭಾರೀ ಖುಷಿಯಲ್ಲಿರುವಂತೆ ಕಾಣುವ ಯುವತಿಯೊಬ್ಬಳು ರೈಲ್ವೇ ನಿಲ್ದಾಣವೊಂದರಲ್ಲಿ ಅಲ್ಕಾ ಯಾಜ್ಞಿಕ್‌ರ ’ಮೇರಾ ದಿಲ್ ತೇರಾ ದೀವಾನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸೀಮಾ ಕಾನೋಜಿಯಾ ಹೆಸರಿನ ಈ ಯುವತಿ ಇನ್‌ಸ್ಟಾಗ್ರಾಂನಲ್ಲಿ ತನ್ನ ನೃತ್ಯದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಬ್ಯುಸಿ ನಿಲ್ದಾಣವೊಂದರಲ್ಲಿ ಅಷ್ಟೆಲ್ಲಾ ಮಂದಿ ನೋಡುತ್ತಿರುವ ವೇಳೆಯೇ ಈಕೆ ಅದ್ಯಾವುದಕ್ಕೂ ಕೇರ್‌ ಮಾಡದೇ ತನ್ನಿಚ್ಛೆಯಂತೆ ಕುಣಿಯತ್ತಿರುವ ಈ ವಿಡಿಯೋ ನೆಟ್ಟಿಗನ್ನು ಸೆಳೆದಿದೆ.

ಈ ವಿಡಿಯೋವನ್ನು ಜನ ಅಷ್ಟಾಗಿ ಇಷ್ಟ ಪಡದೇ ಇದ್ದರೂ ಸಹ ಒಂದು ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ. ಈ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ 3,20,000 ಅನುಯಾಯಿಗಳಿದ್ದಾರೆ.

“ಅಕ್ಕಾ ಡ್ಯಾನ್ಸ್ ಮಾಡೋದೇ ಆದರೆ ಹುಶಾರಾಗಿ ಡಾನ್ಸ್ ಮಾಡಿ. ಹಿಂದೆ ಹುಡುಗರು ಹೆದರುತ್ತಿದ್ದಾರೆ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

https://youtu.be/wdy4NwsHXEI

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...