HomeCrimeಚರಂಡಿಯೊಳಗಿಂದ 10 ಅಡಿ ಸುರಂಗ ಕೊರೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಚರಂಡಿಯೊಳಗಿಂದ 10 ಅಡಿ ಸುರಂಗ ಕೊರೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಹತ್ತು ಅಡಿ ಸುರಂಗ ಕೊರೆದು ಆಭರಣದ ಅಂಗಡಿಯೊಂದರಲ್ಲಿ 15 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಜರುಗಿದೆ.

ಅಂಗಡಿಯ ಪಕ್ಕದ ಚರಂಡಿಯ ಇಟ್ಟಿಗೆಗಳನ್ನು ತೆಗೆದು, ಅಲ್ಲಿಂದ ಅಂಗಡಿಯೊಳಗೆ ಸುರಂಗ ಕೊರೆದಿದ್ದಾರೆ ಈ ಕಳ್ಳರು. ಸೋಮವಾರ-ಮಂಗಳವಾರ ಬೆಳಗ್ಗಿನ ಜಾವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಯೂಶ್ ಗಾರ್ಗ್ ಹೆಸರಿನ ಅಂಗಡಿ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, 10-15 ಲಕ್ಷ ರೂ. ಬೆಲೆ ಬಾಳುವ ಆಭರಣದ ಕಳುವಾಗಿರುವುದಾಗಿ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ತಮ್ಮ ಅಂಗಡಿಯನ್ನು ತೆರೆದ ವೇಳೆ ಹೀಗೆ ಸುರಂಗ ಕೊರೆದಿದ್ದನ್ನು ಕಂಡ ಅಂಗಡಿ ಮಾಲೀಕ ಅಕ್ಷರಶಃ ದಂಗಾಗಿದ್ದಾರೆ.

ಕಳ್ಳರು ಪರಾರಿಯಾಗಿದ್ದು, ಅವರನ್ನು ಸೆರೆ ಹಿಡಿಯಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular