HomeInternationalON CAMERA: ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು, ಈವರೆಗೆ 11 ಮಂದಿ ಸಾವು

ON CAMERA: ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು, ಈವರೆಗೆ 11 ಮಂದಿ ಸಾವು

ನಿಯಂತ್ರಣ ಮೀರಿ ಓಡುತ್ತಿರುವ ಹಣದುಬ್ಬರಕ್ಕೆ ಪರಿಣಾಮವನ್ನು ಬಡವರ ಮೇಲೆ ತಗ್ಗಿಸಲೆಂದು ಪಾಕಿಸ್ತಾನ ಸರ್ಕಾರ ಉಚಿತವಾಗಿ ಗೋಧಿ ಹಿಟ್ಟು ಹಂಚುವ ಯೋಜನೆಗೆ ಚಾಲನೆ ನೀಡಿದೆ. ಇದರ ಪರಿಣಾಮವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ.

ಪೇಶಾವರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾದ ವಿಡಿಯೋವೊಂದರಲ್ಲಿ ಜನರು ಗೋಧಿ ಹೊತ್ತೊಯ್ಯುತ್ತಿರುವ ವಾಹನವೊಂದರ ಹಿಂದೆ ಓಡಿ ಹೋಗುತ್ತಿರುವುದನ್ನು ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಉಚಿತ ವಿತರಣಾ ಕೇಂದ್ರಗಳಲ್ಲಿ ಉಂಟಾದ ನೂಕು ನುಗ್ಗಲಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದು, ಇದರಲ್ಲಿ ಮಹಿಳೆಯರೂ ಸೇರಿದ್ದಾರೆ.

ಮಂಗಳವಾರದಂದು ಇಬ್ಬರು ವಯಸ್ಕ ಮಹಿಳೆಯರು ಹಾಗೂ ಪುರುಷರೊಬ್ಬರು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ 60ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

https://twitter.com/srdmk01/status/1640404923522371584?ref_src=twsrc%5Etfw%7Ctwcamp%5Etweetembed%7Ctwterm%5E1640404923522371584%7Ctwgr%5E86a57c0b5884f89d1f1690444ced9f7f19ae68c5%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-people-crowd-to-collect-free-wheat-supplied-by-pakistan-government-leads-to-stampede-and-deaths

For Latest News Updates, Join Our Whatsapp Community🚩
RELATED ARTICLES

Most Popular