
ಅವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದು ತಾನು ಪರಿಣಿತಿ ಚೋಪ್ರಾಗೆ ಕರೆ ಮಾಡಿ ಅಭಿನಂದಿಸಿದೆ ಎಂದು ಹೇಳಿದರು. “ಇದು ಅಂತಿಮವಾಗಿ ಸಂಭವಿಸಿದೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಾನು ಅವಳಿಗೆ ಎಲ್ಲಾ ಅದೃಷ್ಟವನ್ನು ಬಯಸುತ್ತೇನೆ,” ಎಂದು ಗಾಯಕ ಹಾರ್ಡಿ ಸಂಧು ಡಿಎನ್ಎಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಗಾಯಕ ಹಾರ್ಡಿ ಸಂಧು ನಟಿ ಪರಿಣಿತಿಯೊಂದಿಗೆ 2022 ರ ಸ್ಪೈ-ಥ್ರಿಲ್ಲರ್ ಕೋಡ್ ನೇಮ್: ತಿರಂಗ’ದಲ್ಲಿ ಕೆಲಸ ಮಾಡಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ಪರಿಣಿತಿ ಚೋಪ್ರಾ ಅವರು ಮದುವೆ ಬಗ್ಗೆ ಚರ್ಚಿಸಿದ್ದರು. ನಾವು ಕೋಡ್ ನೇಮ್: ತಿರಂಗಾ ಚಿತ್ರೀಕರಣದಲ್ಲಿದ್ದಾಗ ಮದುವೆಯ ಬಗ್ಗೆ ಚರ್ಚೆ ನಡೆಸುತ್ತಿದ್ದೆವು . ಆಗ ಅವರು ನನಗೆ ಸರಿಯಾದ ವ್ಯಕ್ತಿ ಸಿಕ್ಕಿದ ನಂತರವೇ ನಾನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದುದಾಗಿ ತಿಳಿಸಿದರು.
ಮುಂಬೈನ ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಕಳೆದ ಬುಧವಾರ ರಾತ್ರಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡರು.

