HomeKarnatakaBIG NEWS: ಚುನಾವಣೆ ಹೊತ್ತಲ್ಲೇ ಬಿಜೆಪಿ ಶಾಸಕರ ಮತ್ತೊಂದು ಆಡಿಯೋ ವೈರಲ್

BIG NEWS: ಚುನಾವಣೆ ಹೊತ್ತಲ್ಲೇ ಬಿಜೆಪಿ ಶಾಸಕರ ಮತ್ತೊಂದು ಆಡಿಯೋ ವೈರಲ್

ರಾಯಚೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಆಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ವಿರುದ್ಧವೇ ಮಾತನಾಡಿದ್ದಾರೆ ಎನ್ನಲಾಗಿದೆ.

ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ತನ್ನ ಆಪ್ತರೊಂದಿಗೆ ಮಾತನಾಡಿದ್ದಾರೆ ಎಂಬ ಮೂರು ನಿಮಿಷಗಳ ಆಡಿಯೋ ವೈರಲ್ ಆಗಿದೆ. ಪ್ರಧಾನಿ ಮೋದಿ, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆ ಉಡಾಫೆ ಮಾತನಾಡಿದ್ದಾರೆ.

ಮೋದಿನೂ ಪಾದಿನೂ ಇಲ್ಲ ಯಾರೂ ಇಲ್ಲ. ಮೋದಿ ರೈಟ್ ಹ್ಯಾಂಡ್ ಗೆ ನಾನು ಕೇಳಲ್ಲ, ನಾನೇ ಸಿಂಗಲ್ ಆರ್ಮಿ. ನನಗೆ ರೈಟ್, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು ನಾನೇ ಮೋದಿ, ನಾನೇ ಟ್ರಂಪ್. ಎಲೆಕ್ಷನ್ ನಲ್ಲಿ ಸೋತರೂ ಚಿಂತೆಯಿಲ್ಲ. ಗೆದ್ರೂ ಚಿಂತೆಯಿಲ್ಲ. ಚಿಂತೆ ಇಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್ ಮಾತ್ರ. ನಾನು ದೇವರು ಇದ್ದಂಗೆ. ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡಿ ಅಂತ ಹೇಳ್ತೀನಿ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ. ನಾನೇ ದೈವ ಬರೆತೀನಿ ಎಂದು ಆಡಿಯೋದಲ್ಲಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ಚುನಾವಣೆ ಸಂದರ್ಭದಲ್ಲಿಯೇ ವೈರಲ್ ಆಗಿರುವುದು ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular