HomeKarnatakaBIG NEWS: ಸರ್ಕಾರಿ ವಾಹನಕ್ಕೆ ಸಚಿವರಿಂದ ವಿಶೇಷವಾಗಿ ಬೀಳ್ಕೊಡುಗೆ

BIG NEWS: ಸರ್ಕಾರಿ ವಾಹನಕ್ಕೆ ಸಚಿವರಿಂದ ವಿಶೇಷವಾಗಿ ಬೀಳ್ಕೊಡುಗೆ

ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಸಿಎಂ, ಸಚಿವರು, ಶಾಸಕರು, ವಿಪಕ್ಷ ನಾಯಕರು ಸರ್ಕಾರಿ ವಾಹನಗಳಿಗೆ ಗುಡ್ ಬೈ ಹೇಳಿದ್ದಾರೆ.

ನೀತಿ ಸಂಹಿತೆ ಜಾರಿಯಾಗಿರುವುದರಿಂದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ವಿಪಕ್ಷ ನಾಯಕರು ಸರ್ಕಾರಿ ವಾಹನಗಳನ್ನು, ಸರ್ಕಾರಿ ಸೌಲಭ್ಯ ಬಳಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ವಾಹನ ಬಿಟ್ಟು, ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದಾರೆ.

ಕ್ರೀಡಾ ಸಚಿವ ನಾರಾಯಣಗೌಡ ಸರ್ಕಾರಿ ವಾಹನಕ್ಕೆ ವಿಶೇಷವಾಗಿ ಬೀಳ್ಕೊಟ್ಟಿದ್ದಾರೆ. ಸರ್ಕಾರಿ ವಾಹನಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ, ಆರತಿ ಬೆಳಗಿ ಬೀಳ್ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular