HomeInternationalಅಮ್ಮ ನೀನು ನನ್ನ ಯಾಕೆ ತಿಂದೆ: ತಾಯಿ ಜೊತೆಗಿನ ಪುಟ್ಟ ಕಂದನ ಸಂಭಾಷಣೆಗೆ ಫಿದಾ ಆದ...

ಅಮ್ಮ ನೀನು ನನ್ನ ಯಾಕೆ ತಿಂದೆ: ತಾಯಿ ಜೊತೆಗಿನ ಪುಟ್ಟ ಕಂದನ ಸಂಭಾಷಣೆಗೆ ಫಿದಾ ಆದ ನೆಟ್ಟಿಗರು

ಮಕ್ಕಳ ಮುದ್ದುಮುದ್ದಾದ ಮಾತು ಕೇಳೊದಕ್ಕೆನೇ ಖುಷಿ. ಅವರ ತೊದಲು ಮಾತು, ಮುಗ್ಧತೆ ತುಂಬಿದ ಮುಖ ನೋಡಿದ್ರೆ ನಗು ಉಕ್ಕಿ ಬಂದು ಬಿಡುತ್ತೆ.

ಕೆಲವೊಮ್ಮೆ ಅವರ ಮಾತು ದೊಡ್ಡವರನ್ನೇ ಶಾಕ್ ಮಾಡುವಂತ ದೊಡ್ಡ-ದೊಡ್ಡ ಮಾತಾಗಿರುತ್ತೆ. ಇನ್ನು ಕೆಲವೊಮ್ಮೆ ಅವುಗಳ ಮಾತು ಕೇಳಿದ್ರೆ ಪ್ರೀತಿ ಉಕ್ಕಿ ಬಂದು ಬಿಡುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪುಟಾಣಿಯೊಬ್ಬ ಆಡಿದ್ದ ಮಾತು ಸಖತ್ ವೈರಲ್ ಆಗಿದೆ.

ಅದು ತಾಯಿ-ಮಗನ ಮಾತುಕತೆ. ಮಗ ತಾಯಿಗೆ ಕೇಳಿದ್ದ ಮಾತು ಏನು ಅಂತ ಗೊತ್ತಾದ್ರೆ, ನಿಮಗೆ ನಗು ಬರದೇ ಇರದು. ಅಷ್ಟಕ್ಕೂ ವಿಡಿಯೋವನ್ನ truelaugh ಅನ್ನುವ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿ 2 ವರ್ಷದ ಪೋರ ತನ್ನ ಅಮ್ಮನಿಗೆ ಪ್ರಶ್ನೆಯೊಂದನ್ನ ಕೇಳುತ್ತಾನೆ. ‘ಅಮ್ಮ ನೀನು ನನಗೆ ಏಕೆ ತಿಂದೆ ಅಂತ’ ಈ ಮಾತು ಕೇಳಿ ನೀವು ಶಾಕ್ ಆದ್ರೀ ತಾನೆ. ಅದಕ್ಕೆ ಆ ಪುಟಾಣಿ ಅಮ್ಮ’ ಇಲ್ಲ ಮಗನೇ ನಾನು ತಿಂದಿಲ್ಲ ಅದಕ್ಕೆ ಆ ಪೋರ ಮತ್ತೆ ಇಲ್ಲ ಅಮ್ಮ ನನ್ನನ್ನ ನೀನು ತಿಂದಿದ್ದೆ’ ಅದಕ್ಕೆ ಆತನ ಅಮ್ಮ ‘ಯಾವಾಗ ನಾನು ನಿನ್ನನ್ನ ತಿಂದೆ’ ಎಂದು ಕೇಳುತ್ತಾಳೆ. ಆತ ಮತ್ತೆ ‘ಹೊಟ್ಟೆಯಲ್ಲಿ ಇದ್ದಾಗ ನನ್ನ ಫೋಟೋ ತೋರಿಸಿದ್ದೇ ಅಲ್ವಾ ಆಗ’ ಈ ಮಾತು ಕೇಳಿ ಆತನ ಅಮ್ಮನಿಗೆ ನಗು ಬಂದು ಬಿಡುತ್ತೆ.

ಆದರೂ ನಗುವನ್ನ ತಡೆಹಿಡಿದು, ಆ ಪುಟಾಣಿಯ ತಲೆಯಲ್ಲಿ ಇರುವ ಗೊಂದಲವನ್ನು ದೂರ ಮಾಡುತ್ತಾಳೆ. `ಹೌದು ಮಗನೆ, ನೀನು ನನ್ನ ಹೊಟ್ಟೆಯಲ್ಲಿದ್ದೆ, ಆದ್ರೆ ನಾನು ನಿನ್ನನ್ನ ತಿಂದಿರರ್ಲಿಲ್ಲ. ಎಲ್ಲ ಮಕ್ಕಳು ಅವರವರ ಅಮ್ಮಂದಿರ ಹೊಟ್ಟೆಯಲ್ಲೇ ಹುಟ್ಟೋದು. ವೈದ್ಯರು ನನ್ನ ಹೊಟ್ಟೆಯಿಂದ ನಿನ್ನನ್ನ ಹೊರಗೆ ತಂದಿರೋದು.

ಇಷ್ಟು ಹೇಳಿದರೂ ಪಾಪದ ಕಂದಮ್ಮನಿಗೆ ಅದು ಅರ್ಥ ಆಗಿರಲಿಲ್ಲ. ಆತ ಮತ್ತಷ್ಟು ಕನ್ಫ್ಯೂಸ್ ಆಗಿ, ತನ್ನ ಅಮ್ಮನಿಗೆ ‘ಆದರೂ ನೀನು ನನ್ನನ್ನ ತಿನ್ನಬಾರದಾಗಿತ್ತು’ ಎಂದು ಹೇಳುತ್ತಾನೆ. ತನ್ನ ಮಗನ ಮುಗ್ಧ ಮಾತನ್ನ ಕೇಳಿದ ಆ ಅಮ್ಮ ಮಗನೇ ನೀನು ತುಂಬಾ ಟೇಸ್ಟಿಯಾಗಿದ್ದೆ, ಅದಕ್ಕೆ ನಿನ್ನನ್ನ ತಿಂದೆ’ ಎಂದು ಹೇಳುತ್ತಾಳೆ. ಕೊನೆಗೆ ಆತ ‘ ಇನ್ನು ಮುಂದೆ ನನ್ನ ತಿನ್ನಬೇಡ’ ಎಂದು ಹೇಳುತ್ತಾನೆ. ಈ ಅಮ್ಮ – ಮಗನ ಸಂಭಾಷಣೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://youtu.be/p3QUhvaFjd4

For Latest News Updates, Join Our Whatsapp Community🚩
RELATED ARTICLES

Most Popular