ಶಟಲ್ ಕಾಕ್ಗಳನ್ನು ತಯಾರಿಸುವಾಗ ಎಷ್ಟೊಂದು ಶ್ರದ್ಧೆ ವಹಿಸಿ ಕೆಲಸ ಮಾಡಲಾಗುತ್ತದೆ ಎಂಬ ಕುತೂಹಲದ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ತಯಾರಿಸುವ ಸಂಕೀರ್ಣವಾದ ಕರಕುಶಲತೆಯನ್ನು ವಿಡಿಯೋ ಎತ್ತಿ ತೋರಿಸುತ್ತದೆ.
ವ್ಯಕ್ತಿಯೊಬ್ಬ ಶಟಲ್ ಕಾಕ್ ಅನ್ನು ಕರಕುಶಲವಾಗಿ ತಯಾರಿಸುವುದು ಮತ್ತು ಸ್ವಯಂ-ತಿರುಗಿಸುವ ಯಂತ್ರದಲ್ಲಿ ಪರೀಕ್ಷೆಗಳನ್ನು ನಡೆಸುವುದನ್ನು ವೀಡಿಯೊ ಒಳಗೊಂಡಿದೆ.
ಶಟಲ್ ಕಾಕ್ ಸರಿಯಾಗಿ ಕೆಲಸ ನಿರ್ವಹಿಸುವುದನ್ನು ಈ ಯಂತ್ರದಲ್ಲಿ ನೋಡಲಾಗುತ್ತದೆ. ಸ್ವಲ್ಪವೇ ಸಂದೇಹ ಬಂದರೂ ಅದರ ಗರಿಗಳನ್ನು ಕಿತ್ತು ಮತ್ತೊಂದು ಕಡೆ ಇಟ್ಟು ಪುನಃ ಯಂತ್ರದಲ್ಲಿ ತಿರುಗಿಸಿ ನೋಡಲಾಗುತ್ತದೆ. ಅದು ಸರಿಯಾಗಿದೆ ಎಂದು ಕಂಡುಕೊಳ್ಳುವವರೆಗೂ ಹೀಗೆ ಗರಿಗಳನ್ನು ಬದಲಾಯಿಸುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಒಂದು ಶಟಲ್ಕಾಲ್ ತಯಾರಿಕೆಗೆ ಇಷ್ಟೊಂದು ಸಮಯ ಹಿಡಿಯುತ್ತದೆಯೇ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೊ ಈಗಾಗಲೇ ಐದು ಮಿಲಿಯನ್ ವೀಕ್ಷಣೆಗಳನ್ನು ಮತ್ತು 60 ಸಾವಿರ ಇಷ್ಟಗಳನ್ನು ಸಂಗ್ರಹಿಸಿದೆ.