HomeIndiaBIG NEWS: ಶಿಕ್ಷೆಯ ಬೆನ್ನಲ್ಲೇ ರಾಹುಲ್‌ ಗಾಂಧಿಗೆ ಬೇಲ್

BIG NEWS: ಶಿಕ್ಷೆಯ ಬೆನ್ನಲ್ಲೇ ರಾಹುಲ್‌ ಗಾಂಧಿಗೆ ಬೇಲ್

ಎಲ್ಲ ಕಳ್ಳರು ಮೋದಿ ಎಂಬ ಉಪ ನಾಮವನ್ನೇ ಏಕೆ ಹೊಂದಿರುತ್ತಾರೆ ಎಂದು ತಮ್ಮ  ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಸೂರತ್‌ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈ ತೀರ್ಪು ಹೊರ ಬಿದ್ದ ಬೆನ್ನಲ್ಲೇ ರಾಹುಲ್‌ ಗಾಂಧಿಯವರಿಗೆ ಜಾಮೀನು ಸಸಹ ಮಂಜೂರಾಗಿದ್ದು, ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

2019 ರಲ್ಲಿ ಭಾಷಣ ಮಾಡುವ ವೇಳೆ ರಾಹುಲ್ ಗಾಂಧಿ, ಎಲ್ಲ ಕಳ್ಳರು ಮೋದಿ ಎಂಬ ಉಪ ನಾಮವನ್ನೇ ಏಕೆ ಹೊಂದಿರುತ್ತಾರೆ ಎಂದು ಪ್ರಶ್ನಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರವ್‌ ಮೋದಿ  ವಂಚನೆ ಪ್ರಕರಣವನ್ನು  ಹಿನ್ನೆಲೆಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ರಾಹುಲ್‌ ಟೀಕೆ ಮಾಡಿದ್ದರು.

ಈ ಹೇಳಿಕೆಯನ್ನು ಪ್ರಶ್ನಿಸಿ ಸೂರತ್‌ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ತೀರ್ಪು ಹೊರ ಬಿದ್ದಿದೆ.

For Latest News Updates, Join Our Whatsapp Community🚩
RELATED ARTICLES

Most Popular