ಮಂಗಳವಾರ ರಾತ್ರಿ ಅಪಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮ ದೂರದ ದೆಹಲಿಯಲ್ಲೂ ಆಗಿದ್ದು, ಭೂಮಿ ನಡುಗಿದಂಥ ಅನುಭವ ಆಗಿದೆ. ಉತ್ತರ ಭಾರತದ ಇತರೆ ಪ್ರದೇಶಗಳಲ್ಲದೇ ಟರ್ಕಿಮಿನಿಸ್ತಾನ, ಕಜ಼ಕಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಉಜ್ಬೆಕಿಸ್ತಾನ, ಚೀನಾ ಹಾಗೂ ಕಿರ್ಗಿಸ್ತಾನಗಳಲ್ಲೂ ಸಹ ಭೂಕಂಪನದ ಅನುಭವವಾಗಿದೆ.
ಈ ವೇಳೆ ’ಭೂಕಂಪನದ ಬೆಳಕು’ (ಅರ್ತಕ್ವೇಕ್ ಲೈಟ್ಸ್) ಕಾಣಿಸಿಕೊಂಡ ವಿಡಿಯೋವೊಂದನ್ನು ಟ್ವಿಟಿಗ ಆಶುತೋಶ್ ಪಾಠಕ್ ಶೇರ್ ಮಾಡಿಕೊಂಡಿದ್ದಾರೆ.
ಅಮೆರಿಕದ ಭೂವಿಜ್ಞಾನ ಸರ್ವೇ ಪ್ರಕಾರ, “ಅರ್ತ್ಕ್ವೇಕ್ ಲೈಟ್ಸ್ ಅನ್ನು ಆಗಸದಲ್ಲಿ ಬೆಳಕಿನ ಪ್ರಕಾಶ ಅಥವಾ ಬೆಳಕಿನ ಚೆಂಡುಗಳ ರೂಪದಲ್ಲಿ ಕಾಣಬಹುದಾಗಿದೆ. ಶೀಟ್ ಲೈಟಿಂಗ್ ಅಥವಾ ಸ್ಟ್ರೀಮರ್ಗಳ ರೂಪದಲ್ಲೂ ಸಹ ಈ ದೃಶ್ಯವನ್ನು ನೋಡಬಹುದಾಗಿದೆ.”
ಈ ಪ್ರಕ್ರಿಯೆಯ ಹಿಂದಿನ ಕಾರಣಗಳೇನೆಂದು ವಿಜ್ಞಾನಿಗಳಿಗೂ ಇನ್ನೂ ಪೂರ್ಣವಾಗಿ ತಿಳಿದು ಬಂದಿಲ್ಲ. ಆಶುತೋಶ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಆಗಸದಲ್ಲಿ ಕೆಂಪಿನಿಂದ ನೇರಳೆಗೆ ಬಣ್ಣಗಳ ಬದಲಾವಣೆ ಆಗುತ್ತಿರುವುದನ್ನು ನೋಡಬಹುದಾಗಿದೆ.