HomeInternational102 ವರ್ಷಗಳ ಕಾಲ ವಾಸವಿದ್ದ ಮನೆಯನ್ನು ಮಾರಾಟಕ್ಕಿಟ್ಟ ಹಿರಿಯಜ್ಜಿ

102 ವರ್ಷಗಳ ಕಾಲ ವಾಸವಿದ್ದ ಮನೆಯನ್ನು ಮಾರಾಟಕ್ಕಿಟ್ಟ ಹಿರಿಯಜ್ಜಿ

ಸಾಮಾನ್ಯವಾಗಿ ಮನೆಯೊಂದರಲ್ಲಿ 102 ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ ಎಂದು ಕೇಳಿದೊಡನೆಯೇ ನಾವು ಅಲ್ಲಿ ಕನಿಷ್ಠ ಮೂರು ತಲೆಮಾರುಗಳು ಜೀವಿಸಿವೆ ಎಂದು ಭಾವಿಸುವುದು ಸಾಮಾನ್ಯ.

ಆದರೆ ಬ್ರಿಟನ್‌ನ ಈ ಮನೆಯೊಂದರಲ್ಲಿ ವಾಸಿಸುತ್ತಿರುವ 104 ವರ್ಷದ ಹಿರಿಯಜ್ಜಿಯೊಬ್ಬರು ಮೂರು ತಲೆಮಾರುಗಳ ಜನರೊಂದಿಗೆ ಅಲ್ಲೇ ವಾಸಿಸುತ್ತಾ ಬಂದಿದ್ದಾರೆ. ಮೊದಲ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜನಿಸಿದ ನ್ಯಾನ್ಸಿ ಜೋನ್ ಗಿಫ್ಫರ್ಡ್ ಮೂರು ಬೆಡ್‌ರೂಂನ ಈ ಮನೆಯಲ್ಲಿ ಬಹುತೇಕ ತಮ್ಮ ಇಡೀ ಜೀವಿತವನ್ನು ಜೀವಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಗ್ಯ ಸಂಬಂಧಿ ಅಗತ್ಯತೆಗಳ ಕಾರಣ ಈ ಮನೆಯನ್ನು ಮಾರಾಟಕ್ಕಿದ್ದಾರೆ ಈ ಅಜ್ಜಿ. ಗ್ಲಾಸ್ಟನ್‌ಬರಿಯಲ್ಲಿರುವ ನರ್ಸಿಂಗ್ ಹೋಂ ಒಂದಕ್ಕೆ ಸೇರಲು ಸಜ್ಜಾಗಿರುವ ನ್ಯಾನ್ಸಿ, £1,69,950ಗೆ (1.7 ಕೋಟಿ ರೂ.) ಅಜ್ಜಿಯ ಈ ಮನೆಯನ್ನು 1921ರಲ್ಲಿ £200ಗೆ ಖರೀದಿ ಮಾಡಲಾಗಿತ್ತು ಎಂದು ಸೊಮರ್ಸೆಟ್‌ ಕೌಂಟಿ ಗ್ಯಾಜ಼ೆಟ್ ವರದಿ ಮಾಡಿದೆ.

ತಮ್ಮ ಮನೆಗೆ ಬಂದ ವೇಳೆ ನ್ಯಾನ್ಸಿಗೆ ಆಗ ಕೇವಲ ಎರಡು ವರ್ಷ ವಯಸ್ಸು. 1882ರಲ್ಲಿ ಕಟ್ಟಲಾದ ಈ ಮನೆಗೆ ಕಾಲಕಾಲಿಕವಾಗಿ ಮಾರ್ಪಾಡುಗಳನ್ನು ಮಾಡುತ್ತಾ, ಹೆಚ್ಚುವರಿ ಗೋಡೆಗಳನ್ನು ಹಾಕಿ, ಅಡುಗೆ ಮನೆಯನ್ನು ಆಧುನೀಕರಣಗೊಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular