ಭಾರತದಲ್ಲಿ ರಂಜಾನ್ ಮಾರ್ಚ್ 24 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಯುಎಇಯಲ್ಲಿ ಮಾರ್ಚ್ 23 ರಂದು ಪ್ರಾರಂಭವಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನ ನೋಡಲಾಗಿಲ್ಲ, ಆದ್ದರಿಂದ ರಂಜಾನ್ ಬುಧವಾರ (ಮಾರ್ಚ್ 22) ರಾತ್ರಿ ಪ್ರಾರಂಭವಾಗುತ್ತದೆ. ಉಪವಾಸದ ಮೊದಲ ದಿನ ಗುರುವಾರ(ಮಾರ್ಚ್ 23) ನಡೆಯಲಿದೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಉಪವಾಸ ಅನುಸರಿಸುತ್ತಾರೆ. ಮಾರ್ಚ್ 24 ರಂದು ಭಾರತದಲ್ಲಿ ರಂಜಾನ್ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಏಪ್ರಿಲ್ 24 ರಂದು ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಪವಿತ್ರ ತಿಂಗಳ ದಿನಾಂಕ ದೇಶದಿಂದ ದೇಶಕ್ಕೆ ಬದಲಾಗುತ್ತದೆ.
ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಅನುಸರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಭೋಜನದೊಂದಿಗೆ ಉಪವಾಸ ಮುಗಿಯುತ್ತದೆ.