ಬೆಂಗಳೂರು: ಈ ಬಾರಿಯ ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ಏಪ್ರಿಲ್ 6ರಂದು ಚೈತ್ರ ಪೂರ್ಣಿಮೆ ದಿನ ನಡೆಯಲಿದೆ.
ಮಾರ್ಚ್ 29ರಿಂದ ಉತ್ಸವ ಆರಂಭವಾಗಿ ಏಪ್ರಿಲ್ 8ರವರೆಗೆ ನಡೆಯಲಿದ್ದು, 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ.
ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಹೊರಲಿದ್ದಾರೆ. ಕಳೆದ 12 ವರ್ಷಗಳಿಂದ ಜ್ಞಾನೇಂದ್ರ ಅವರು ಕರಗ ಹೊರುತ್ತಿದ್ದಾರೆ. ಏಪ್ರಿಲ್ 8ರಂದು ರಾತ್ರಿ 12 ಗಂಟೆಗೆ ನಗರ ಪ್ರದಕ್ಷಿಣೆ ನಡೆಯಲಿದೆ. ಒಟ್ಟಾರೆ ಮಾರ್ಚ್ 29ರಂದು ಧ್ವಜಾರೋಹಣ, ಪೂಜಾ ವಿಧಿವಿಧಾನದ ಮೂಲಕ ಅರಂಭವಾಗುವ ಕರಗ ಏ.8ರವರೆಗೆ ಜರುಗಲಿದೆ.