HomeKarnatakaBIG NEWS: ಮೊನ್ನೆಯಷ್ಟೇ ಗಂಡ-ಹೆಂಡತಿ ಕಾಲು ಹಿಡಿದುಕೊಂಡಿದ್ದರು, ಈಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂದ BSY

BIG NEWS: ಮೊನ್ನೆಯಷ್ಟೇ ಗಂಡ-ಹೆಂಡತಿ ಕಾಲು ಹಿಡಿದುಕೊಂಡಿದ್ದರು, ಈಗ ಪಕ್ಷ ಬಿಟ್ಟು ಹೋಗಿದ್ದಾರೆ ಎಂದ BSY

ಬೆಂಗಳೂರು: ಬಾಬುರಾಮ್ ಚಿಂಚನಸೂರ ಬಿಜೆಪಿ ತ್ಯಜಿಸಿದ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೊನ್ನೆ ತಾನೆ ಗಂಡ ಹೆಂಡತಿ ಕಾಲು ಹಿಡಿದುಕೊಂಡಿದ್ದರು ನಾವು ಎಲ್ಲೂ ಹೋಗಲ್ಲ ಎಂದಿದ್ದರು. ಇಂದು ಕಾಂಗ್ರೆಸ್ ಗೆ ಸೇರುತ್ತಿದ್ದಾರೆ ಎಂದು ಗರಂ ಆಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ನಾವು ಎಲ್ಲೂ ಹೋಗಲ್ಲ ಎಂದು ಮೊನ್ನೆಯಷ್ಟೇ ಹೇಳಿದ್ದರು. ಈಗ ಚಿಂಚನಸೂರ ಪಕ್ಷ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದು ಪ್ರಶ್ನಿಸಿದರು.

ಬೇರೆ ಬೇರೆ ಒತ್ತಡಕ್ಕೆ ಪಕ್ಷ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular