HomeInternationalಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ....!

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ.

ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ ತನ್ನ ಮಡದಿಯೊಂದಿಗೆ ಬಿಡುವಿನ ಸಮಯದಲ್ಲಿ ಖುಷಿಯಾಗಿದ್ದ ವೇಳೆ ಯಾರೋ ಬಂದು ಬಾಗಿಲು ತಟ್ಟಿದಂತಾಗಿದೆ. ಯಾರೆಂದು ನೋಡಲು ಹೋದ ಸ್ಕಾಟ್‌ಗೆ ತನ್ನ ಮನೆಗೆ ಬಂದಿರುವುದು ಮಾನವ ಅತಿಥಿಯಲ್ಲ ಬದಲಿಗೆ ಮೊಸಳೆ ಎಂದು ಅರಿವಾಗಿ ಬೆಚ್ಚಿಬಿದ್ದಿದ್ದಲ್ಲದೇ, ಅವರ ಮೇಲೆ ಮೊಸಳೆ ದಾಳಿ ಮಾಡಲು ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 5ರ ರಾತ್ರಿ ಈ ಘಟನೆ ಜರುಗಿದ್ದು, ಸ್ಕಾಟ್‌ಗೆ ಮೇಲ್ತೊಡೆಯಲ್ಲಿ ಮೊಸಳೆ ದಾಳಿಯ ಗಾಯಗಳಾಗಿವೆ. ಈ ಗಾಯಗಳಿಂದ ಸ್ಕಾಟ್‌ ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಒಂಬತ್ತು ಅಡಿ ಉದ್ದವಿದ್ದ ಮೊಸಳೆಯನ್ನು ಫ್ಲಾರಿಡಾದ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಸಮಿತಿಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಂದ ಹಾಗೆ ಫ್ಲಾರಿಡಾದಲ್ಲಿ 13 ಲಕ್ಷಕ್ಕೂ ಹೆಚ್ಚು ಮೊಸಳೆಗಳಿವೆ.

For Latest News Updates, Join Our Whatsapp Community🚩
RELATED ARTICLES

Most Popular