
ಬ್ಯಾಟರಾಯನಪುರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈ ಬಾರಿ ಚುನಾವಣೆಯಲ್ಲಿ ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ ಎಂದು ಪರೋಕ್ಷವಾಗಿ ಕೃಷ್ಣ ಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗೆ ಇನ್ನೊಂದು ಹೆಸರೇ ಭಯೋತ್ಪಾದನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರರು, ಭ್ರಷ್ಟಾಚಾರಿಗಳ ದೇಶವಾಗಿತ್ತು. ಆ ವೇಳೆ ಕುಟುಂಬ ರಾಜಕಾರಣಕ್ಕೆ ಮನ್ನಣೆ ಕೊಡುವ ಕೆಲಸ ಆಯಿತು ಎಂದು ಕಿಡಿಕಾರಿದ್ದಾರೆ.

