ಚಿತಾಲ್ (ಚುಕ್ಕೆ ಇರುವ ಜಿಂಕೆ) ಗುಂಪೊಂದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು (ಐಎಫ್ಎಸ್) ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಚಿತಾಲ್ಗಳು ತಮ್ಮ ಸ್ವಾಭಾವಿಕ ನೆಲೆಯಲ್ಲಿ ಸ್ವಚ್ಛಂದವಾಗಿ ಓಡುತ್ತಿರುವ ವಿಡಿಯೋವನ್ನು ನಿಧಾನಗತಿಯಲ್ಲಿ ತೋರಲಾಗಿದೆ. “ಸ್ವಾತಂತ್ರ್ಯ ಹೀಗೆ ಕಾಣುತ್ತದೆ. ನಿನ್ನೆ” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕಸ್ವಾನ್, ವನ್ಯಜೀವಿಗಳ ಸ್ವಾಭಾವಿಕ ಜೀವನದ ಝಲಕ್ಗಳನ್ನು ನೆಟ್ಟಿಗರಿಗೆ ಪರಿಚಯಿಸುತ್ತಲೇ ಇರುತ್ತಾರೆ. ಜೊತೆಯಲ್ಲಿ ವನ್ಯಜೀವ ಸಂರಕ್ಷಣೆಯ ಮಹತ್ವವನ್ನೂ ಸಾರುತ್ತಾರೆ ಪ್ರವೀಣ್.
ಈ ವಿಡಿಯೋವನ್ನು ಅದಾಗಲೇ 25,000 ಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದು, ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ.