ನಿಮ್ಮ ಮಕ್ಕಳ ಸ್ನೇಹಿತರ ಬಗ್ಗೆ ಅರಿತುಕೊಳ್ಳಿ

“ಮೊದಲು ಇವನು ಹೀಗೆ ಇರಲೇ ಇಲ್ಲ. ನಮ್ಮ ಮಾತು ಮೀರಿ ಎಲ್ಲೂ ಹೋಗ್ತಾ ಇರಲಿಲ್ಲ”
“ಇತ್ತೀಚೆಗೆ ಇವಳಿಗೆ ನಮ್ಮ ಮಾತು ಸಹ್ಯವಾಗೋದೆ ಇಲ್ಲ. ತುಂಬಾ ಕೋಪ” ಹದಿ ಹರೆಯದ ಮಕ್ಕಳ ಪೋಷಕರಲ್ಲಿ ಇಂತಹ ದೂರು ಸಾಮಾನ್ಯವಾಗಿ ಕೇಳಿಬರುತ್ತದೆ.

ಟೀನೇಜ್ ಗೆ ಕಾಲಿಟ್ಟ ಕೂಡಲೇ ಮಕ್ಕಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಪೋಷಕರು ಗಮನಿಸುತ್ತಾರೆ. ತಮ್ಮ ಮಕ್ಕಳು ಹರೆಯಕ್ಕೆ ಕಾಲಿಡುತ್ತಿದ್ದಂತೆ ಪೋಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ. ಕಳವಳ ಪ್ರಾರಂಭವಾಗುತ್ತದೆ. ಹರೆಯದ ಮಕ್ಕಳನ್ನು ಸ್ನೇಹಿತರಂತೆ ನೋಡಬೇಕು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಎಷ್ಟೇ ಸ್ನೇಹದಿಂದ ಕಂಡರೂ ಹೆತ್ತವರ ಮಾತು ಮಕ್ಕಳಿಗೆ ಕೆಲವೊಮ್ಮೆ ರುಚಿಸದೆ ಹೋಗಬಹುದು.

ಇದಕ್ಕಾಗಿ ಪೋಷಕರು ತಮ್ಮ ಮಕ್ಕಳ ಸಹಪಾಠಿಗಳು, ಸ್ನೇಹಿತರ ಬಗ್ಗೆ ಒಂದಷ್ಟು ಮಾಹಿತಿಯನ್ನು ಕಾಲ ಕಾಲಕ್ಕೆ ತಕ್ಕಂತೆ ತಿಳಿದುಕೊಳ್ಳುವುದು ಒಳಿತು. ಮಕ್ಕಳ ಸ್ನೇಹಿತರನ್ನು ಕೆಲವು ಸಂದರ್ಭಗಳಲ್ಲಿ ಮನೆಗೆ ಕರೆದು ಮಾತನಾಡಿಸಿದರೆ, ಅವರ ನಡವಳಿಕೆ, ಅಭಿರುಚಿ, ಆಸಕ್ತಿ ಇವುಗಳ ಬಗ್ಗೆ ಸುಲಭವಾಗಿ ತಿಳಿಯಬಹುದು. ತಮ್ಮ ಮಗುವಿನ ಸ್ನೇಹಬಳಗ ಸರಿ ಇದೆಯೇ ಎಂದು ಖಾತ್ರಿ ಮಾಡಿಕೊಂಡರೆ ಹೆಚ್ಚು ಸೇಫ್. ಸಹವಾಸದಿಂದ ಸನ್ಯಾಸಿಯೂ ಕೆಡುತ್ತಾನೆ ಎಂಬ ಗಾದೆ ಮಾತೇ ಇಲ್ಲವೇ?

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read