HomeKarnatakaBIG NEWS: ಫೇಸ್ ಬುಕ್ ಲೈವ್ ಸಾಕು; ಚಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ, ಮಕ್ಕಳು ಸಾಯುತ್ತಿದ್ದಾರೆ, ಅವರನ್ನೂ...

BIG NEWS: ಫೇಸ್ ಬುಕ್ ಲೈವ್ ಸಾಕು; ಚಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ, ಮಕ್ಕಳು ಸಾಯುತ್ತಿದ್ದಾರೆ, ಅವರನ್ನೂ ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ; ಪ್ರತಾಪ್ ಸಿಂಹ ವಿರುದ್ಧ ಹಳ್ಳಿ ಹಕ್ಕಿ ಕಿಡಿ

ಮೈಸೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸ್ವಪಕ್ಷದ ವಿರುದ್ಧವೇ ಮತ್ತೆ ಕಿಡಿಕಾರಿದ್ದಾರೆ.

ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿರುವ ಹೆಚ್.ವಿಶ್ವನಾಥ್, ಪ್ರತಾಪ್ ಸಿಂಹ ಮಿನಿ ಕಾಂಟ್ರ್ಯಾಕ್ಟರ್. ಹೆದ್ದಾರಿ ವಿಚಾರದಲ್ಲಿ ಇವರು ಮಾಡಿದ್ದೇನು? ರಸ್ತೆ ಕಾಮಗಾರಿ ಸಾಗಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ದಿನ ಬೆಳಗಾದರೆ ಹೈವೆಯಲ್ಲಿ ನಿಂತು ಫೇಸ್ ಬುಕ್ ಲೈವ್ ಮಾಡುವುದು ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಿ ಚಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ, ಮಕ್ಕಳು ಸಾಯುತ್ತಿದ್ದಾರೆ. ಅವರನ್ನೂ ಸ್ವಲ್ಪ ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ. ಅವನ್ಯಾರೋ ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಅನ್ನುವ ಅಧಿಕಾರಿ ಸರ್ವೀಸ್ ರಸ್ತೆ ಮಾಡುವ ಕಾನೂನು ಎಲ್ಲಿದೆ ಅಂತಾನೆ? ಏನ್ರೀ ಮೋದಿಯವರೇ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ? ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular