HomeInternationalVIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್...!

VIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್…!

ದುಬೈನ ಅತ್ಯಂತ ಜನಪ್ರಿಯ ಹೊಟೇಲ್‌ ಬುರ್ಜ್ ಅಲ್ ಅರಬ್‌ ನೆತ್ತಿ ಮೇಲಿರುವ ಹೆಲಿಪ್ಯಾಡ್ ಮೇಲೆ ಹಗುರ ವಿಮಾನವೊಂದನ್ನು ಲ್ಯಾಂಡ್ ಮಾಡಿದ ಪೋಲಿಶ್ ಪೈಲಟ್ ಲ್ಯೂಕ್ ಜ಼ೆಪಿಯೆಲಾ, ಈ ಸಾಧನೆಗೈದ ಮೊದಲಿಗರೆನಿಸಿದ್ದಾರೆ.

ರೆಡ್‌ ಬುಲ್ ಏರ್‌ ರೇಸ್ ಚಾಲೆಂಜರ್‌ ಕ್ಲಾಸ್‌ನ ವಿಶ್ವ ಚಾಂಪಿಯನ್ ಆಗಿರುವ ಲ್ಯೂಕ್ ಇದಕ್ಕಾಗಿ ಎರಡು ವರ್ಷಗಳ ಕಠಿಣ ತಾಲೀಮು ನಡೆಸುತ್ತಾ ಬಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ 27 ಮೀಟರ್‌ ಸ್ಥಳಾವಕಾಶದಲ್ಲಿ ಇಂಥ ಒಂದು ಮೈನವಿರೇಳಿಸುವ ಸ್ಟಂಟ್‌ ಮಾಡಿರುವ ಲ್ಯೂಕ್, ವೈಮಾನಿಕ ಕ್ಷೇತ್ರದಲ್ಲಿ ಅದ್ಭುತವೊಂದನ್ನು ಸಾಧಿಸಿದ್ದಾರೆ.

ಈ ಸ್ಟಂಟ್‌ನ ವಿಡಿಯೋವನ್ನು ರೆಡ್‌ಬುಲ್ ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಅಧಿಕೃತ ಪುಟದಲ್ಲಿ ಶೇರ್‌ ಮಾಡಿಕೊಂಡಿದೆ.

https://youtu.be/SitSaxAokZY

For Latest News Updates, Join Our Whatsapp Community🚩
RELATED ARTICLES

Most Popular