HomeIndiaಕೋರ್ಟ್​ ಆವರಣದಲ್ಲೇ ವಕೀಲರ ಕಾಳಗ: ವಿಡಿಯೋ ವೈರಲ್

ಕೋರ್ಟ್​ ಆವರಣದಲ್ಲೇ ವಕೀಲರ ಕಾಳಗ: ವಿಡಿಯೋ ವೈರಲ್

ದ್ವಾರಕಾ: ಕೋರ್ಟ್​ ಆವರಣದಲ್ಲಿಯೇ ವಕೀಲರುಗಳ ನಡುವೆ ಭಾರಿ ಕಾದಾಟ ಆಗಿರುವ ವಿಡಿಯೋ ವೈರಲ್​ ಆಗಿದೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಭದ್ರತಾ ಸಿಬ್ಬಂದಿಯೂ ಇರುವಾಗಲೇ ಈ ಘಟನೆ ನಡೆದಿದೆ.

ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಡೆಡ್ಲಿ ಲಾ’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋದಲ್ಲಿ ಇಬ್ಬರು ಜಗಳವಾಡುತ್ತಿರುವಾಗ ಒಬ್ಬ ವಕೀಲ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಇದು ಇನ್ನೊಬ್ಬ ವಕೀಲರು ಒಳಗೆ ನುಗ್ಗಿ ಇನ್ನೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡುವಾಗ ನೆರೆದವರು ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಜಗಳ ನಿಲ್ಲಿಸಲಿಲ್ಲ.

ವಕೀಲರೇ ಈ ರೀತಿ ಹೀನಾಯವಾಗಿ ನಡೆದುಕೊಂಡರೆ ಗತಿಯೇನು ಎಂದು ಹಲವರು ಕಮೆಂಟ್​ ಮೂಲಕ ಪ್ರಶ್ನಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular