HomeEntertainmentRRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು.....! ನಕ್ಕು ನಗಿಸುವ ವಿಡಿಯೋ ವೈರಲ್​

RRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು…..! ನಕ್ಕು ನಗಿಸುವ ವಿಡಿಯೋ ವೈರಲ್​

ತೆಲುಗು ಚಲನಚಿತ್ರ ‘RRR’ ನ ‘ನಾಟು ನಾಟು’ ಆಸ್ಕರ್​ನ ಅತ್ಯುತ್ತಮ ಮೂಲ ಗೀತೆಯಲ್ಲಿ ಪ್ರಶಸ್ತಿ ಪಡೆದು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದೆ. ಈ ಹಾಡಿಗೆ ತಮ್ಮದೇ ಆದ ರೀತಿಯಲ್ಲಿ ಸ್ಟೆಪ್​ ಹಾಕಿ ರೀಲ್ಸ್ ಮಾಡುವವರಿಗೇನೂ ಕಮ್ಮಿ ಇಲ್ಲ.

ಆದರೆ ಇಲ್ಲೊಂದು ವಿಭಿನ್ನ ವಿಡಿಯೋ ವೈರಲ್​ ಆಗಿದೆ. ಅದೇನೆಂದರೆ RRR ಚಿತ್ರವು ಬೇರೆಯೊಂದು ಕಡೆಯಿಂದ ಕದಿಯಲಾಗಿದೆ ಎಂಬ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಗುವುದಂತೂ ಸುಳ್ಳಲ್ಲ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಆರ್​ಆರ್​ಆರ್​ ಚಿತ್ರದ ದೃಶ್ಯಗಳನ್ನು ಟಾಮ್​ ಆ್ಯಂಡ್​ ಜೆರ್ರಿಯಿಂದ ಕದ್ದದ್ದು ಎಂದಿರುವ ಬಳಕೆದಾರರು ಕೆಲವೊಂದು ಟಾಮ್​ ಆ್ಯಂಡ್​ ಜೆರ್ರಿಯ ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಟಾಮ್​ ಆ್ಯಂಡ್​ ಜೆರ್ರಿ ಮಾಡುವ ರೀತಿಯಲ್ಲಿಯೇ ಕೆಲವೊಂದು ಸೀನ್​ಗಳು ಆರ್​ಆರ್​ಆರ್ ​ನಲ್ಲಿ ಮಾಡಿರುವುದನ್ನು ನೋಡಬಹುದು. ಇದನ್ನು ನೋಡಿದರೆ ನಗು ತಡೆಯುವುದಕ್ಕಂತೂ ಖಂಡಿತವಾಗಿಯೂ ಸಾಧ್ಯವಿಲ್ಲ. ಮೂಡ್​ ಕೆಟ್ಟಾಗ ನಿಜಕ್ಕೂ ಈ ವಿಡಿಯೋ ನೋಡಬೇಕು ಎಂದು ಹಲವು ಬಳಕೆದಾರರು ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular