
ವಿದೇಶಿಗರು, ಸ್ಟಾರ್ಸ್ ಸೇರಿದಂತೆ ಸಾಮಾನ್ಯ ಜನರು ಈ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕ್ತಿದ್ದಾರೆ. ಇದೀಗ ಆನ್ ಲೈನ್‌ನಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವೈರಲ್ ವೀಡಿಯೊದಲ್ಲಿ, ಟ್ಯಾಟೂ ಕಲಾವಿದ ಸಾಯಿ ಕಿಟ್ಟು ಅವರು ತಮ್ಮ ಮಗ ರೆಯಾನ್ಶ್ ಅವರೊಂದಿಗೆ ನಾಟು ನಾಟು ನೃತ್ಯವನ್ನು ಆನಂದಿಸುತ್ತಿರುವುದನ್ನು ನೋಡಬಹುದು.
RRR ಚಿತ್ರದ ನಾಟು ನಾಟು ಹಾಡು ಆಸ್ಕರ್ 2023 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೆದ್ದಿದೆ. ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್ ಟ್ರೋಫಿಯನ್ನು ಸ್ವೀಕರಿಸಿದರು.

