HomeKarnatakaBIG NEWS: ದೆಹಲಿ ಪ್ರವಾಸ ಕೈಗೊಂಡ ಸಚಿವ ವಿ.ಸೋಮಣ್ಣ; ಕುತೂಹಲ ಮೂಡಿಸಿದ ವಿದ್ಯಮಾನ

BIG NEWS: ದೆಹಲಿ ಪ್ರವಾಸ ಕೈಗೊಂಡ ಸಚಿವ ವಿ.ಸೋಮಣ್ಣ; ಕುತೂಹಲ ಮೂಡಿಸಿದ ವಿದ್ಯಮಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಬೆನ್ನಲ್ಲೇ ವಸತಿ ಸಚಿವ ವಿ,ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಊಹಾಪೋಹಗಳಿಗೆ ನಿನ್ನೆ ತೆರೆ ಎಳೆದಿದ್ದ ಸಚಿವ ಸೋಮಣ್ಣ ಇದೀಗ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಇಂದು ಸಚಿವ ವಿ.ಸೋಮಣ್ಣ ದೆಹಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಕೆಲ ಕಾರಣಗಳಿಂದ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಮುನಿಸಿಕೊಂಡಿದ್ದ ಸಚಿವ ಸೋಮಣ್ಣ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ನಿನ್ನೆ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಬಿಜೆಪಿಯಲ್ಲಿ ಇರುವುದಾಗಿ ಹೇಳಿ ಊಹಾಪೋಹಕ್ಕೆ ತೆರೆ ಎಳೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸಚಿವ ಸೋಮಣ್ಣ ಇದೀಗ ದೆಹಲಿಗೆ ತೆರಳತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular