ಪ್ರತಿ ವರ್ಷದ ಬಜೆಟ್‌ನಲ್ಲೂ ತಪ್ಪದೇ ಬೆಲೆ ಏರಿಕೆಯ ಬಿಸಿ ಕಾಣುವ ವಸ್ತುಗಳಲ್ಲಿ ಒಂದಾಗಿರುವ ಸಿಗರೇಟಿನ ಬೇಡಿಕೆ ಮಾತ್ರ ಯಾವ ಕಾರಣಕ್ಕೂ ಹೆಚ್ಚುತ್ತಲೇ ಸಾಗುತ್ತದೆ. ಖುದ್ದು ಸಿಗರೇಟಿನ ಪ್ಯಾಕ್‌ಗಳ ಮೇಲೆಯೇ ಶಾಸನ ವಿಧಿಸಿದ ಎಚ್ಚರಿಕೆ ಎಂದು, ’ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ತಂಬಾಕು ಕ್ಯಾನ್ಸರ್‌ಕಾರಕ’ ಲಗತ್ತಿಸಿದರೂ ಸಹ ಧೂಮಪ್ರಿಯರಿಗೆ ಚಟದ ಮುಂದೆ ಈ ಎಚ್ಚರಿಕೆಗಳೆಲ್ಲಾ ಗೌಣ.
ನಗರ ಪ್ರದೇಶಗಳ ಧೂಮಪ್ರಿಯರು ಸಿಗರೇಟಿಗೆ ಮೊರೆ ಹೋದರೆ ಗ್ರಾಮೀಣ ಪ್ರದೇಶದಲ್ಲಿ ಬೀಡಿಗಳನ್ನು ಇಷ್ಟ ಪಡುತ್ತಾರೆ.
ಸುಲಭವಾಗಿ ತಯಾರಿಸಬಹುದಾದ ಬೀಡಿಗಳನ್ನು ಉತ್ಪಾದಿಸಿ ಗ್ರಾಮೀಣ ಪ್ರದೇಶದ ಅನೇಕ ಮಹಿಳೆಯರು ಜೀವನ ಸಾಗಿಸುತ್ತಿದ್ದಾರೆ. ಭಾರತದಲ್ಲಿ ಮಾರಾಟವಾಗುವ ಸಿಗರೇಟುಗಳ ಹತ್ತು ಪತ್ತು ಬೀಡಿಗಳು ಬಿಕರಿಯಾಗುತ್ತಿವೆ.
ಆದರೆ ಬೀಡಿಗಳು ಸಿಗರೇಟುಗಳಿಗಿಂದ ಹೆಚ್ಚು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಸಿಗರೇಟುಗಳಲ್ಲಿ ಫಿಲ್ಟರ್ ಇದ್ದು, ಸಂಸ್ಕರಿಸಲಾದ ತಂಬಾಕು ಬಳಸಲಾಗುತ್ತದೆ. ಆದರೆ ಬೀಡಿಗಳಲ್ಲಿ ಕಚ್ಛಾ ತಂಬಾಕು ಇದ್ದು, ಯಾವುದೇ ಫಿಲ್ಟರ್ ಇರುವುದಿಲ್ಲ. ಅಲ್ಲದೇ ಸಿಗರೇಟಿಗಿಂತ ಬೀಡಿಗಳು 3-5 ಪಟ್ಟು ಹೆಚ್ಚು ನಿಕೋಟಿನ್, ಟಾರ್ ಹಾಗೂ ಕಾರ್ಬನ್ ಮೋನಾಕ್ಸೈಡ್‌ಗಳನ್ನು ಬಿಡುಗಡೆ ಮಾಡುತ್ತವೆ.
1900ರ ವರೆಗೂ ಬಾಂಬೆ ಹಾಗೂ ಗುಜರಾತ್‌ಗಳಿಗೆ ಸೀಮಿತವಾಗಿದ್ದ ಬೀಡಿ ಉತ್ಪಾನೆ, 1899ರ ಬರದ ಬಳಿಕ ಗುಜರಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶದ ವಿವಿಧ ಪ್ರದೇಶಗಳಿಗೆ ವಲಸೆ ಹೋದ ಕಾರಣದಿಂದ ಬೀಡಿ ತಯಾರಿಕೆ ಸಣ್ಣ ಕೈಗಾರಿಕೆಯಾಗಿ ಮಾರ್ಪಾಡಾಯಿತು. ಇಂದು ದೇಶದ 30 ಲಕ್ಷಕ್ಕೂ ಹೆಚ್ಚಿನ ಮಂದಿ ಬೀಡಿ ಉತ್ಪಾದನೆಯಲ್ಲಿ ಭಾಗಿಯಾಗಿದ್ದು, ಬೀಡಿಗಳನ್ನು ಬೇರೆ ದೇಶಗಳಿಗೆ ರಫ್ತು ಸಹ ಮಾಡಲಾಗುತ್ತಿದೆ. ಮಾರ್ವಾಡಿ ಶಬ್ದವಾದ ’ಬೀಡ’ದಿಂದ ’ಬೀಡಿ’ ಶಬ್ದ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಬಹುತೇಕ ಕಡೆಗಳಲ್ಲಿ ’ಬೀಡ’ ಎಂದರೆ ’ಪಾನ್’ ಎಂಬುದಾಗಿದೆ.