HomeKarnatakaBIG NEWS: ಬಿಜೆಪಿ MLC ಆರ್.ಶಂಕರ್ ಮನೆ ಮೇಲೆ ಐಟಿ ದಾಳಿ

BIG NEWS: ಬಿಜೆಪಿ MLC ಆರ್.ಶಂಕರ್ ಮನೆ ಮೇಲೆ ಐಟಿ ದಾಳಿ

ಹಾವೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ರಾಜಕೀಯ ನಾಯಕರಿಗೆ ಐಟಿ ಶಾಕ್ ಆರಂಭವಾಗಿದೆ. ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.ಶಂಕರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿನ ಆರ್.ಶಂಕರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿ ವೇಳೆ ಸಾರ್ವಜನಿಕರಿಗೆ ಹಂಚಲು ತಂದಿದ್ದ ಹಲವು ವಸ್ತುಗಳು ಪತ್ತೆಯಾಗಿವೆ. ಆರ್.ಶಂಕರ್ ಭಾವಚಿತ್ರವಿರುವ ತಟ್ಟೆ, ಲೋಟಾ, ಸೀರೆ ಬಾಕ್ಸ್, ಎಲ್ ಕೆ ಜಿ ಹಾಗೂ ಪದವಿ ಮಕ್ಕಳಿಗೆ ಹಂಚಲು ತಂದಿದ್ದ ಶಾಲಾ ಬ್ಯಾಗ್ ಸೇರಿದಂತೆ ಸುಮಾರು 8 ಕೋಟಿ ರೂ ಮೌಲ್ಯದ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular