HomeIndiaಮಾಲ್ ನ 3ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯ ಸಾವು

ಮಾಲ್ ನ 3ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯ ಸಾವು

ಇಂದೋರ್(ಮಧ್ಯಪ್ರದೇಶ): ಚೋತ್ರಾಂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವೈದ್ಯರೊಬ್ಬರು ಸಿ21 ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾ. ಮನಮೋಹನ್ ಸೋನಿ(65) ಮೃತಪಟ್ಟವರು. 70 ಅಡಿ ಎತ್ತರದಲ್ಲಿರುವ ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯರು ಬೆನ್ನುಹುರಿ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಉಪಾಹಾರ ಸೇವಿಸದೆ ತನ್ನ ಚಾಲಕನೊಂದಿಗೆ ಮನೆಯಿಂದ ಹೊರ ಹೋಗಿ ಮಾಲ್‌ ಹೊರಗೆ ವಾಹನ ನಿಲ್ಲಿಸಿ ಅಲ್ಲೇ ಕಾಯುವಂತೆ ಚಾಲಕನಿಗೆ ತಿಳಿಸಿದ್ದಾರೆ. ‘ಶಾಪಿಂಗ್‌ಗೆ’ ಒಳಗೆ ಹೋದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಡ್ರೈವರ್ ಮಾಲ್‌ ನ ಹೊರಗೆ ಸುಮಾರು 3 ಗಂಟೆಗಳ ಕಾಲ ಕಾದು ಒಮ್ಮೆ ಅವರೊಂದಿಗೆ ಮಾತನಾಡಿದ್ದಾರೆ. ಕರೆ ಮಾಡಿದ ಕೆಲವು ನಿಮಿಷಗಳ ನಂತರ, ಅವರು ಮೂರನೇ ಮಹಡಿಯಿಂದ ಹಾರಿದ್ದಾರೆ. ಮನಮೋಹನ್ ರೇಲಿಂಗ್ ಹತ್ತುತ್ತಿರುವುದನ್ನು ಗಮನಿಸಿದ ಸೆಕ್ಯುರಿಟಿ ಅವರನ್ನು ತಲುಪುವ ಮೊದಲು ಜಿಗಿದು ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular