ಪಿಕೆ ಸಿನೆಮಾ ಅಂದಾಕ್ಷಣ, ಅನ್ಯಗ್ರಹದಿಂದ ಭೂಮಿಗೆ ಬಂದ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡಾಡೋದು ನೆನಪಾಗಿ ಬಿಡುತ್ತೆ. ಆತ ತನ್ನನ್ನ ತಾನು ಪಿಕೆ ಎಂದು ಹೇಳಿಕೊಂಡಿದ್ದ ಆತ ಅನ್ಯಗ್ರಹದಿಂದ ಬಂದಿದ್ದ. ಈ ಸಿನೆಮಾ ರಿಲೀಸ್ ಆಗಿ 8 ವರ್ಷ ಆದರೂ ಈ ಸಿನೆಮಾ ಹಾಗೂ ಇದರಲ್ಲಿರುವ ಅಮೀರ್ ಖಾನ್ ಪಾತ್ರ ಯಾರೊಬ್ಬರೂ ಮರೆತಿಲ್ಲ. ಇದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಅಂತಾನೇ ಇಷ್ಟು ದಿನ ಎಲ್ಲರೂ ಅಂದೊಂಡಿದ್ದರು. ಆದರೆ ಈಗ ರಿಯಲ್ ಪಿಕೆ ಬೆತ್ತಲೆಯಾಗಿ ಅಮೆರಿಕಾದಲ್ಲಿ ಕಾಣಿಸಿದ್ದಾನೆ.
ಮಾರ್ಚ್ 8ರಂದು ಸರಿ ಸುಮಾರು ರಾತ್ರಿ 9 ಗಂಟೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬ ಬಟ್ಟೆಯನ್ನೆಲ್ಲ ಬಿಚ್ಚಿ ವರ್ತ್ ಅವೆನ್ಯದ 200 ಬ್ಲಾಕ್‌ನಲ್ಲಿ ಓಡಾಡುತ್ತಿದ್ದ. ಸ್ಥಳೀಯರು ತಕ್ಷಣವೇ ಇದನ್ನ ಪೊಲೀಸರ ಗಮನಕ್ಕೆ ತಂದಿದ್ದಾರೆ. ಆ ಬೆತ್ತಲೆ ವ್ಯಕ್ತಿಯನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆ ಸಮಯದಲ್ಲಿ ವ್ಯಕ್ತಿ ತಾನು ಅನ್ಯಗ್ರಹದಿಂದ ಬಂದಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಇನ್ನಷ್ಟು ತನಿಖೆ ಮಾಡಿದಾಗ ಈ ವ್ಯಕ್ತಿಯ ಹೆಸರು ಜೇಸನ್ ಸ್ಮಿತ್ ಹೇಳಲಾಗುತ್ತಿದೆ.
44 ವರ್ಷದ ಜೇಸನ್ ವರ್ತನೆ ವಿಚಿತ್ರವಾಗಿದ್ದು, ಆತ ಮೊದಲಿಗೆ ತನ್ನ ಬಗ್ಗೆ ಯಾವುದೇ ಮಾಹಿತಿಯನ್ನ ಬಹಿರಂಗ ಪಡಿಸಿರಲಿಲ್ಲ. ಪೊಲೀಸರು ಗುರುತಿನ ಚೀಟಿ ತೋರಿಸಲು ಹೇಳಿದರೂ ಆತ ಅದನ್ನ ನಿರಾಕರಿಸಿದ್ದನು. ಆದರೆ ಕೆಲ ಕಾಲದ ನಂತರ ಪೊಲೀಸರ ಮುಂದೆ ಬಾಯ್ಬಿಟ್ಟ ಈ ವ್ಯಕ್ತಿ ತಾನು ವೆಸ್ಟ್ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಸದ್ಯಕ್ಕೆ ಫ್ಲೋರಿಡಾ ಪೊಲೀಸರು ಈತನ ಮೇಲೆ ಮೂರು ಕ್ರಿಮಿನಲ್ ಕೇಸ್‌ನ ದಾಖಲಿಸಿದ್ದಾರೆ.