HomeKarnatakaBIG NEWS: IIT ಗ್ರೀನ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

BIG NEWS: IIT ಗ್ರೀನ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ IIT ಗ್ರೀನ್ ಕ್ಯಾಂಪಸ್ ಲೋಕಾರ್ಪಣೆ ಮಾಡಿದ್ದಾರೆ.

ರಾಜ್ಯದ ಮೊಟ್ಟ ಮೊದಲ ಐಐಟಿ ಗ್ರೀನ್ ಕ್ಯಾಂಪಸ್ ಇದಾಗಿದ್ದು, ಇಡೀ ಕ್ಯಾಂಪಸ್ ನ್ನು ಪರಿಸರ ಸ್ನೇಹಿ ಕ್ಯಾಂಪಸ್ ಆಗಿ ನಿರ್ಮಿಸಲಾಗಿದೆ. ಪರಿಸರ ಸಂರಕ್ಷಣೆ, ಜೀವ ವೈವಿದ್ಯ ರಕ್ಷಣೆ, ಶಬ್ದ ಮಾಲಿನ್ಯ ನಿಯಂತ್ರಣ, 2 ಡಿಗ್ರಿಯಷ್ಟು ತಾಪಮಾನ ಕಡಿಮೆ ಮಾಡುವ ಮಾದರಿ ಕ್ಯಾಂಪಸ್ ಇದಾಗಿದೆ.

ಐಐಟಿ ಕ್ಯಾಂಪಸ್ ನಲ್ಲಿ ಮಳೆನೀರು ಕೊಯ್ಲು, ಸೌರಶಕ್ತಿ ಬಳಕೆಯನ್ನು ಅಳವಡಿಸಲಾಗಿದ್ದು, 852 ಕೋಟಿ ವೆಚ್ಚದಲ್ಲಿ 535 ಎಕರೆ ಪ್ರದೇಶದಲ್ಲಿ ನೂತನ ಐಐಟಿ ಕ್ಯಾಂಪಸ್ ಕಟ್ಟಡ ತಲೆ ಎತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular