ಜಗತ್ತಿನಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ ಆಗಿ ಪರಿವರ್ತಿಸಲು ಯೋಜನೆ ಹಾಕಿಕೊಂಡಿದೆ.
ಜಪಾನೀ ಆಟೋಮೊಬೈಲ್ ದಿಗ್ಗಜ ಮಿತ್ಸುಬಿಷಿ ಇದೇ ಸಂಬಂಧ ತನ್ನ ಪಾಲುದಾರರಾದ ಫ್ರೆಂಚ್ ಕಾರು ಉತ್ಪಾದಕರಾದ ರೆನೌ ಎಸ್ಎ ಹಾಗೂ ನಿಸಾನ್ ಮೋಟರ್ ಕೋಗಳೊಂದಿಗೆ ಹೊಸ ಒಡಂಬಡಿಕೆಗಳಿಗೆ ಸಹಿ ಮಾಡಿದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಈ ಸಂಬಂಧ ತನ್ನೆಲ್ಲಾ ಪ್ರಯತ್ನಗಳನ್ನು ಒರೆಗೆ ಹಚ್ಚಿ, ತಾನು ಉತ್ಪಾದಿಸುವ 50ರಷ್ಟು ಕಾರುಗಳನ್ನು 2030ರ ವೇಳೆಗೆ ವಿದ್ಯುದೀಕರಣಗೊಳಿಸುವುದಾಗಿ ಮಿತ್ಸುಬಿಷಿ ಈ ಹಿಂದೆ ತಿಳಿಸಿತ್ತು. ಇದೇ ವೇಳೆ ಯೂರೋಪ್ನಲ್ಲಿ ಇವಿಗಳನ್ನು ಪರಿಚಯಿಸಲು ಮಿತ್ಸುಬಿಷಿ ಸಿದ್ಧತೆ ನಡೆಸಿದ್ದು, ಈ ಸಂಬಂಧ ಶೀಘ್ರವೇ ಘೋಷಣೆಗಳನ್ನು ಮಾಡಲಿದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ.