HomeCrimeBIG NEWS: ಗಗನಸಖಿ ಆತ್ಮಹತ್ಯೆ; ಸ್ನೇಹಿತನ ಮೇಲೆ ಅನುಮಾನ

BIG NEWS: ಗಗನಸಖಿ ಆತ್ಮಹತ್ಯೆ; ಸ್ನೇಹಿತನ ಮೇಲೆ ಅನುಮಾನ

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದು ಗಗನಸಖಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.

ಹಿಮಾಚಲಪ್ರದೇಶ ಮೂಲದ ಅರ್ಚನಾ ಧೀಮನ್ ಮೃತ ಗಗನಸಖಿ. ತನ್ನ ಗೆಳೆಯ ಆದೇಶ್ ನನ್ನು ಭೇಟಿಯಾಗಲೆಂದು ಬೆಂಗಳೂರಿಗೆ ಬಂದಿದ್ದ ಅರ್ಚನಾ ತಡ ರಾತ್ರಿ ಅಪಾರ್ಟ್ ಮೆಂಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದೇಶ್ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದೇಶ್ ಹಾಗೂ ಅರ್ಚನಾ ಕೆಲ ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ಆದೇಶ್ ಭೇಟಿಗೆಂದು ಅರ್ಚನಾ ಬಂದಿದ್ದಾಗ ಘಟನೆ ನಡೆದಿದೆ. ತಡರಾತ್ರಿ ಏನಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಅರ್ಚನಾ ಆತ್ಮಹತ್ಯೆ ಬಗ್ಗೆ ಆದೇಶ್ ಬಗ್ಗೆ ಅನುಮಾನ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular