ಜನರು ತಮ್ಮ ದೇಸಿ ಸಂಸ್ಕೃತಿಯನ್ನು ಸಾಕಷ್ಟು ಹೆಮ್ಮೆಯಿಂದ ಬಿಂಬಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಅಂಥದ್ದೇ ಒಂದು ದೇಸಿ ಮನುಷ್ಯನ ವೀಡಿಯೊ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿರುವುದನ್ನು ನೋಡಬಹುದು. ಈತ ಕ್ಲೋಯ್ ಎಂದು ಬರೆಯಲಾದ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆ. ಬಾಕ್ಸ್ ಮೇಲೆ ಕ್ಲೋಯ್ ಎಂದು ಬರೆಯಲಾಗಿದೆ. ಅಸಲಿಗೆ, ಕ್ಲೋಯ್ ಎಂದರೆ ಇದು ಜಪಾನಿನ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್. ಕೈಚೀಲಗಳು, ಪರಿಕರಗಳು ಮತ್ತು ಪಾದರಕ್ಷೆಗಳನ್ನು ಒಳಗೊಂಡಿರುವ ಬ್ರಾಂಡ್ ಇದು.
ಆದರೆ ಈ ದೇಸಿ ವ್ಯಕ್ತಿ ಅದನ್ನು ‘ಚೋಲೆ’ ಬೇಕೇ ಚೋಲೆ ಎನ್ನುತ್ತಾ ಮಾರಾಟ ಮಾಡುತ್ತಾನೆ. ಇದನ್ನು ನೋಡಿದ ಮಹಿಳೆಯೊಬ್ಬರು ಅದು ಚೋಲೆ ಅಲ್ಲ ಕ್ಲೋಯ್ ಎಂದು ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಆ ವ್ಯಕ್ತಿ ಚೋಲೆನೋ ಕ್ಲೋಯ್ನೋ ನಾನಂತೂ ಚೋಲೆ ಎಂದೇ ಹೇಳುತ್ತೇನೆ ಎನ್ನುತ್ತಾನೆ. ಈ ವ್ಯಕ್ತಿಯ ದೇಸಿ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.