HomeKarnatakaBIG NEWS: ಅಭಿವೃದ್ಧಿ ಮಾಡಿದ್ದರೆ ಜಿಲ್ಲೆಯ ಜನ ಹೇಳಬೇಕು; ಸಂಸದೆ ಸುಮಲತಾಗೆ ಟಾಂಗ್ ನೀಡಿದ ಮಾಜಿ...

BIG NEWS: ಅಭಿವೃದ್ಧಿ ಮಾಡಿದ್ದರೆ ಜಿಲ್ಲೆಯ ಜನ ಹೇಳಬೇಕು; ಸಂಸದೆ ಸುಮಲತಾಗೆ ಟಾಂಗ್ ನೀಡಿದ ಮಾಜಿ ಸಿಎಂ HDK

ಹಾಸನ: ಮಂಡ್ಯ ಭದ್ರ ಕೋಟೆ ಅಂತಾರೆ ಏನು ಉದ್ದಾರ ಮಾಡಿದ್ದಾರೆ ಎಂಬ ಪ್ರಶ್ನೆ ಮಾಡುವ ಕಾಲ ಬಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೇ ಟಾಂಗ್ ನೀಡಿದ್ದ ಸಂಸದೆ ಸುಮಲತಾ ಹೇಳಿಕೆಗೆ ತಿರುಗೆಟು ನೀಡಿರುವ ಕುಮಾರಸ್ವಾಮಿ, ನಮ್ಮ ಭದ್ರ ಕೋಟೆಯನ್ನು ಅಭಿವೃದ್ಧಿ ಮಾಡಿದ್ದರೆ ಸಂತೋಷ ಎಂದಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಅವರು ದೊಡ್ಡವರು, ದೊಡ್ಡ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ. ಸುಮಲತಾ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಿದ್ದರೆ ಅದನ್ನು ಜನರು ಹೇಳಬೇಕು. ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿಲ್ಲ, ಸ್ವಾಭಿಮಾನದಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಆರೋಗ್ಯ ಸಮಸ್ಯೆ ಕಡೆಗಣಿಸಿ ಶ್ರಮಿಸುತ್ತಿದ್ದೇನೆ. ಸ್ವಾರ್ಥಕ್ಕಾಗಿ ದೇಹದಂಡನೆ ಮಾಡುತ್ತಿಲ್ಲ. ನನ್ನ ಮನೆ ಬಳಿ ಬಂದ ಬಡ ತಾಯಂದಿರ ಕಣ್ಣೀರು ನೋಡಿದ್ದೇನೆ. ಬಡ ರೈತರ ಕಣ್ಣೀರು ಒರೆಸಬೇಕೆಂಬುದೊಂದೇ ನಮ್ಮ ಉದ್ದೇಶ. ಹಣವೇ ಮುಖ್ಯ ಎಂಬುವವರಿಗೆ ಪಾಪ ಪ್ರಜ್ಞೆ ಕಾಡುವುದಿಲ್ಲ. ಸಿಎಂ ಬಳಿಯಾಗಲಿ, ಕಾಂಗ್ರೆಸ್ ನಾಯಕರ ಬಳಿಯಾಗಲಿ ಜನ ತಮ್ಮ ಕಷ್ಟ ಹೇಳಿಕೊಳ್ಳಲಾಗುತ್ತಿಲ್ಲ. ನಾವು ಜನರ ಬಳಿ ಹೋಗುತ್ತಿದ್ದೇವೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular