
ಶಿವಾಜಿ ಮಹಾರಾಜರ ಪ್ರತಿಮೆಯನ್ನು ಎರಡೂ ರಾಜಕೀಯ ಪಕ್ಷಗಳು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿವೆ ಎಂದು ಆರೋಪಿಸಿ ಮಾರ್ಚ್ 19ರಂದು ಶಿವಾಜಿ ಪ್ರತಿಮೆ ಶುದ್ಧಗೊಳಿಸಲು ಮುಂದಾಗಿದೆ.
ಪ್ರತಿಮೆ ಶುದ್ಧೀಕರಣ ಅಂಗವಾಗಿ ಪಾದಪೂಜೆ, ಪಂಚಾಮೃತ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಾರಾಷ್ಟ್ರದ ವಿವಿಧ ಕೋಟೆಗಳಿಂದ ಶಿವಜ್ಯೋತಿ ತಂದು ಮೆರವಣಿಗೆ ಮಾಡಲು ಸಿದ್ಧತೆ ನಡೆಸಲಾಗಿದೆ. ಬಳಿಕ ಮೆರವಣಿಗೆ ರಾಜಹಂಸಗಡ ಕೋಟೆಗೆ ತೆರಳಲಿದೆ. ಈ ಮೂಲಕವಾಗಿ ಎಂಇಎಸ್ ಬೆಳಗಾವಿಯಲ್ಲಿ ಮತಬೇಟೆಗೆ ಸಜ್ಜಾಗಿದೆ.

